ನವದೆಹಲಿ: ಸಾಮಾನ್ಯ ಜನರ ಪ್ರಯಾಣವೂ ಸುಖಕರವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಗರೀಬ್ ರಥ ರೈಲುಗಳಲ್ಲಿ ನೂತನವಾಗಿ ವಿನ್ಯಾಸಗೊಳಿಸಿರುವ, ಕಡಿಮೆ ದರದ ಎ.ಸಿ ಕೋಚ್‌ಗಳನ್ನು (ಎ.ಸಿ ಎಕಾನಮಿ ಕೋಚ್) ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ನವದೆಹಲಿ: ಸಾಮಾನ್ಯ ಜನರ ಪ್ರಯಾಣವೂ ಸುಖಕರವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಗರೀಬ್ ರಥ ರೈಲುಗಳಲ್ಲಿ ನೂತನವಾಗಿ ವಿನ್ಯಾಸಗೊಳಿಸಿರುವ, ಕಡಿಮೆ ದರದ ಎ.ಸಿ ಕೋಚ್‌ಗಳನ್ನು (ಎ.ಸಿ ಎಕಾನಮಿ ಕೋಚ್) ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಇದೇ ತಿಂಗಳಿನಿಂದ ಅನ್ವಯವಾಗುವಂತೆ ನೂತನ ಕೋಚ್‌ಗಳನ್ನು ಆಯ್ದ ಮಾರ್ಗಗಳ ರೈಲುಗಳಲ್ಲಿ ಅಳವಡಿಸಲಾಗುತ್ತದೆ.
ಎ.ಸಿ-3 ಸೀಟುಗಳಿಗೆ ನಿಗದಿಪಡಿಸಿರುವ ದರಕ್ಕಿಂತಲೂ ಎ.ಸಿ ಎಕಾನಮಿ ಪ್ರಯಾಣ ದರ ಕಡಿಮೆ ಇರಲಿದೆ. ಗರೀಬ್ ರಥ ರೈಲಿನ ಎ.ಸಿ ಎಕಾನಮಿ ಕೋಚ್ ಪ್ರಯಾಣ ದರವು ಎ.ಸಿ-3 ದರಕ್ಕಿಂತ ಶೇ 8-10ರಷ್ಟು ಕಡಿಮೆ ನಿಗದಿ ಮಾಡಲಾಗುತ್ತದೆ.
ಪ್ರಸ್ತುತ, ಗರೀಬ್ ರಥ ರೈಲುಗಳು ಎ.ಸಿ-3, ಎ.ಸಿ-2 ಹಾಗೂ ಚೇರ್ ಕಾರ್ ಕೋಚ್‌ಗಳನ್ನು ಹೊಂದಿವೆ. ಈ ರೈಲುಗಳಿಗೆ ಹೊಸದಾಗಿ ವಿನ್ಯಾಸಗೊಳಿಸಿರುವ 20 ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಿದ ನಂತರ, 18 ಎ.ಸಿ-3 ಎಕಾನಮಿ ಕೋಚ್ ಹಾಗೂ ಎರಡು ಜನರೇಟರ್ ಮೋಟಾರ್ ಕಾರ್‌ಗಳು ಮಾತ್ರ ಇರಲಿದ್ದು, ಚೇರ್ ಕಾರ್‌ಗಳು ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಿರುವ ಎ.ಸಿ-3 ಕೋಚ್‌ಗಳಲ್ಲಿ 72 ಸೀಟುಗಳು ಇರುತ್ತವೆ. ನೂತನ ಎ.ಸಿ ಎಕಾನಮಿ ಕೋಚ್‌ನಲ್ಲಿ 81 ಸೀಟುಗಳನ್ನು ಅಳವಡಿಸಲಾಗಿರುತ್ತದೆ.
ಸದ್ಯ, ದೇಶದ ವಿವಿಧ ಭಾಗಗಳಲ್ಲಿ 26 ಜೋಡಿ ಗರೀಬ್ ರಥ ರೈಲುಗಳು ಸಂಚರಿಸುತ್ತಿವೆ.