HEALTH TIPS

ದೇಹದಲ್ಲಿ ಈ ಬದಲಾವಣೆ ಕಾಣಿಸಿಕೊಂಡರೆ ಅರ್ಥ ಮಾಡಿಕೊಳ್ಳಿ ಬ್ಲಡ್ ಶುಗರ್ ಹೆಚ್ಚಾಗಿರುವುದು ಪಕ್ಕಾ !

 ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಏರು ಪೇರಾದರೂ ದೇಹ ಮೊದಲೇ ಸೂಚನೆಯನ್ನು ನೀಡುತ್ತದೆ.ಅದನ್ನು ನಿರ್ಲಕ್ಷಿಸದೆ ಅರ್ಥ ಮಾಡಿಕೊಂಡರೆ ಆಗುವ ಅನಾಹುತವನ್ನು ತಪ್ಪಿಸಬಹುದು.ಮಧುಮೇಹ ಕೂಡಾ ಹಾಗೆಯೇ.ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ,ರೋಗಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ.ಆದರೆ ದೇಹದಲಿ ಆಗುವ ಬದಲಾವಣೆಗಳು ಯಾವ ಕಾರಣದಿಂದ ಆಗುತ್ತಿವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.

ಈ ಬದಲಾವಣೆಗಳನ್ನು ತಿಳಿದುಕೊಂಡರೆ ಹೆಚ್ಚಿನ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬಹುದು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಸಿಗುವ ಸೂಚನೆ :
ಪಾದಗಳಲ್ಲಿ ಕಂಡುಬರುವ ಲಕ್ಷಣ :

ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ನರಮಂಡಲಕ್ಕೆ ಹಾನಿಯಾಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ.ರೋಗಿಯ ನರಮಂಡಲಕ್ಕೆ ಹಾನಿಯಾದಾಗ ಯಾವುದೇ ಸಂವೇದನೆ ತಿಳಿಯುವುದಿಲ್ಲ. ರಕ್ತ ಪರಿಚಲನೆಯಲ್ಲಿ ತೊಂದರೆಯಾದರೆ, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹೀಗಾದಾಗ ಸೋಂಕನ್ನು ಗುಣಪಡಿಸುವುದು ತುಂಬಾ ಕಷ್ಟಕರವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಅದು ಅಂಗಾಂಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.

ಕಣ್ಣುಗಳಲ್ಲಿ ಬದಲಾವಣೆ :

ರಕ್ತದಲ್ಲಿನ ಸಕ್ಕರೆಯ ಮಟ್ಟವು

ಹೆಚ್ಚಾದಾಗ,ಕಣ್ಣುಗಳ ರೆಟಿನಾದಲ್ಲಿನ ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ.ಇದರಿಂದ ಕಣ್ಣುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ ದೃಷ್ಟಿ ದುರ್ಬಲಗೊಳ್ಳುವುದು, ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ರೋಗ, ಗ್ಲುಕೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಇದಲ್ಲದೆ, ರೆಟಿನೋಪತಿ ಅಪಾಯ ಕೂಡಾ ಎದುರಾಗಬಹುದು.

ಒಸಡುಗಳಲ್ಲಿ ನೋವು :

ಸಕ್ಕರೆಯ ಮಟ್ಟವು ಹೆಚ್ಚಾದಾಗ, ಒಸಡು ರೋಗವೂ ಕಾಣಿಸುತ್ತದೆ. ಇದರಲ್ಲಿ, ರಕ್ತನಾಳಗಳು ಮುಚ್ಚಲ್ಪಡುತ್ತವೆ ಅಥವಾ ದಪ್ಪವಾಗುತ್ತವೆ. ಇದರಿಂದಾಗಿ ಒಸಡುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಅಧಿಕ ರಕ್ತದ ಸಕ್ಕರೆಯಿಂದಾಗಿ, ಬಾಯಿಯಲ್ಲಿ ಬ್ಯಾಕ್ಟೀರಿಯಾವೂ ಬೆಳೆಯುತ್ತದೆ.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. )



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries