HEALTH TIPS

ಏತಡ್ಕ ಸದಾಶಿವ ದೇವರಿಗೆ `ಹಲಸಿನ ಹಣ್ಣಿನ ಅಪ್ಪ' ಸಮರ್ಪಣೆ: ಅಪ್ಪಸೇವೆಯಲ್ಲಿ ಪಾಲ್ಗೊಂಡ ಭಗವದ್ಭಕ್ತರು

               ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಹಲಸಿನ ಹಣ್ಣಿನ ಅಪ್ಪಸೇವೆ ಭಾನುವಾರ ಬೆಳಗ್ಗೆ ಜರಗಿತು. ಊರಪರವೂರ ಅನೇಕ ಮಂದಿ ಭಗವದ್ಭಕ್ತರು ಈ ಸಂದರ್ಭದಲ್ಲಿ ಅಪ್ಪಸೇವೆ ನಿರ್ವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ವೈ. ಶ್ಯಾಮ ಭಟ್ ಮತ್ತು ಏತಡ್ಕ ಮನೆಯವರ ನೇತೃತ್ವದಲ್ಲಿ ಭಗವದ್ಭಕ್ತರ ಸಹಕಾರದೊಂದಿಗೆ ಪ್ರತೀವರ್ಷವೂ ಅಪ್ಪಸೇವೆಯು ಜರಗುತ್ತಿದೆ. ಬೆಳಗ್ಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ ಜರಗಿತು. ಮಧ್ಯಾಹ್ನ ಪ್ರಸಾದ ಭೋಜನ ನಡೆಯಿತು.


  ಅಪ್ಪಸೇವೆ ವಿಶೇಷ :

              ತುಳುವಿನ ಕಾರಾ ತಿಂಗಳಿನ ಒಂದು ದಿನ ಹಲಸಿನ ಹಣ್ಣಿನಿಂದ ತಯಾರಿಸಿದ ಅಪ್ಪವನ್ನು ದೇವರಿಗೆ ಸಮರ್ಪಿಸಲಾಗುವುದು. ಅನೇಕ ವರ್ಷಗಳಿಂದ ಈ ಸೇವೆಯು ನಡೆದುಬರುತ್ತಿದೆ. ಶುದ್ಧವಾದ ದೇಶೀ ದನದ ತುಪ್ಪದಿಂದಲೇ ಅಪ್ಪವನ್ನು ತಯಾರಿಸಲಾಗುತ್ತದೆ. 1944ರಲ್ಲಿ ಪಡ್ರೆ ಗ್ರಾಮದ ಈ ಏತಡ್ಕ ಸದಾಶಿವ ದೇವಸ್ಥಾನದ ಆಸುಪಾಸಿನ ಜಾಗವನ್ನು ಏತಡ್ಕ ದಿ. ಸುಬ್ರಾಯ ಭಟ್ಟರು ಖರೀದಿಸಿದ್ದರು. ಆಗ ದೇವಸ್ಥಾನವು ಮುಳಿಹುಲ್ಲಿನಿಂದ ಕೂಡಿದ್ದಾಗಿತ್ತು. 1948ರಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದರು. ಅಂದಿನಿಂದ ಹಲಸಿನಹಣ್ಣಿನ ಅಪ್ಪಸೇವೆಯು ನಿರಂತರವಾಗಿ ನಡೆದುಬರುತ್ತಿದೆ. ಕಾರಾತಿಂಗಳು ಜನರು ತುಂಬಾ ಕಷ್ಟದಲ್ಲಿರುತ್ತಿದ್ದರು. ಬಡತನದ ಹಿನ್ನೆಲೆಯಲ್ಲಿ ಜನರು ಹಲಸಿನ ಉತ್ಪನ್ನಗಳನ್ನೇ ತಿಂದು ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ತಮ್ಮ ಹಸಿವನ್ನು ನೀಗಿಸಿದ ಹಲಸನ್ನು ದೇವರಿಗೆ ಸಮರ್ಪಿಸುವುದು ಒಂದು ವಾಡಿಕೆಯಾಗಿ ಮುಂದುವರಿಯಿತು. ಇಂದಿಗೂ ಆ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. 2008ರಲ್ಲಿ ಊರಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವವು ಜರಗಿತ್ತು. 




2025ರಲ್ಲಿ ಬ್ರಹ್ಮಕಲಶೋತ್ಸವ :

ಇದೀಗ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ನಡೆದು 2025 ಫೆಬ್ರವರಿ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವವು ಜರಗಲಿರುವುದು. ಪೂರ್ವಭಾವಿಯಾಗಿ ಅನೇಕ ನಿವೃತ್ತಿ ಕಾರ್ಯಗಳು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries