ಉಪ್ಪಳ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಶಿಯೇಶನ್ (ಕೆ.ಪಿ.ಎಸ್.ಟಿ.ಎ ) ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್‍ಚಾಂಡಿ ಸಂಸ್ಮರಣೆ ಹಾಗೂ ಪುಷ್ಪಾರ್ಚನೆ ಗುರುವಾರ ಮುಳಿಂಜ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ವಹಿಸಿದ್ದರು. ಕಂದಾಯ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ಧನ್ ಕೆ.ವಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವಿದ್ಯಾಭ್ಯಾಸ ಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ ಮುಖ್ಯ ಭಾóಷಣ ಮಾಡಿದರು. ಅತಿಥಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಮಾತನಾಡಿದರು. ಅಧ್ಯಾಪಕ ರವಿಶಂಕರ್, ಸಾಯಿರಾ ಟೀಚರ್, ಅನಿತಾ ಟೀಚರ್, ಕಾವ್ಯ, ಫಾತಿಮತ್ ಫಝೀನ, ಗೀತಾಂಜಲಿ, ಅಬ್ದುಲ್‍ಬಶೀರ್ ಶುಭಾಶಂಸನೆಗೈದರು. ಉಪಜಿಲ್ಲಾ ಕಾರ್ಯದರ್ಶಿ ಒ.ಎಮ್ ರಶೀದ್ ಸ್ವಾಗತಿಸಿ ಸೌಮ್ಯ ಪಿ. ವಂದಿಸಿದರು.