ಕೊಟ್ಟಾಯಂ: ಇಂದಿನ ಬಹುತೇಕ ಮಲೆಯಾಳಂ ದಿನಪತ್ರಿಕೆಗಳ ಮೊದಲ ಪುಟದ ಶೀರ್ಷಿಕೆ ಒಂದೇ ರೀತಿಯದ್ದಾಗಿ ಗಮನ ಸೆಳೆಯಿತು. ವಯನಾಡ್ ದುರಂತದ ಹಿನ್ನೆಲೆಯ ಸುದ್ದಿಗಳ ಮುಖಪುಟ ಶೀರ್ಷಿಕೆ ಏಕಪ್ರಕಾರವಾಗಿ ಪ್ರಕಟಗೊಂಡದ್ದು ವಿಶೇಷವೆನಿಸಿತು.
ತಮ್ಮ ಓದುಗರಿಗೆ ವಯನಾಡ್ ದುರಂತವನ್ನು ಪ್ರಸ್ತುತಪಡಿಸಲು ಅವರಿಗೆ ಒಂದೇ ಒಂದು ಪದವಿದೆ: ಉಲ್ಲುಪೊಟ್ಟಿ(ಅಂತರAಗ ಒಡೆಯಿತು-ಉರುಳ್ ಪೊಟ್ಟಲ್ ಎಂದರೆ ಗುಡ್ಡಗಳ ಕುಸಿತ) ಭೂಮಿಯ ಒಳಗಿನಿಂದ ಭುಗಿಲೆದ್ದ ಅನಾಹುತವನ್ನು ವಿವರಿಸಲು ಹಲವರಿಗೆ ಇದಕ್ಕಿಂತ ಉತ್ತಮವಾದ ಪದ ಲಭಿಸಿಲ್ಲ.
ಇತ್ತೀಚೆಗಷ್ಟೇ ಬಿಡುಗಡೆಯಾದ ಉಲ್ಲೋಜುಕ್ ಮಲೆಯಾಳಂ ಚಲಚಿತ್ರದ ಹೆಸರು ಪತ್ರಿಕೆಗಳ ಸಂಪಾದಕರ ಮೇಲೆ ಪ್ರಭಾವ ಬೀರಿರಬಹುದು. ಆದರೆ, ಒಂದೇ ದಿನ ನಡೆದ ದುರಂತ ಘಟನೆಯ ಕುರಿತು ಒಂದೇ ಶೀರ್ಷಿಕೆಯೊಂದಿಗೆ ಪತ್ರಿಕೆಗಳು ಪ್ರಕಟಿಸಿರುವುದು ಅಪರೂಪ. ಮಲಯಾಳಿಗಳು ಧರ್ಮ, ಜಾತಿ ಮತ್ತು ರಾಜಕೀಯದಂತಹ ಪಂಥದ ಆಧಾರದ ಮೇಲೆ ಪರಸ್ಪರ ಹೊಡೆದಾಡಿಕೊಂಡರೂ ವಿಪತ್ತಿನ ಸಮಯದಲ್ಲಿ ಒಗ್ಗಟ್ಟಿನಿಂದಿರುತ್ತಾರೆ ಎಂಬುದು ಆಗಾಗ ಸಾಬೀತಾಗುತ್ತಿದ್ದು, ಇಂದೀಗ ಪತ್ರಿಕೆಯಲ್ಲೂ ಸಮಾನ ಶೀಷ್ಟಿಕೆ ಮೂಲಕ ಪ್ರಕಟವಾಗಿರುವುದು ಕಾಕತಾಳೀಯ.