ತಿರುವನಂತಪುರಂ: ಕೇಂದ್ರ ನೀಡುತ್ತಿಲ್ಲ ಎಂಬ ಕೇರಳದ ನಿತ್ಯದ ಪಲ್ಲವಿ ಇನ್ನು ಮುಂದೆ ನಡೆಯುವುದಿಲ್ಲ. ಕೇಂದ್ರವು ನಿಗದಿಪಡಿಸಿದ ಸಂಪೂರ್ಣ ಉಚಿತ ಪಡಿತರ ಪಾಲನ್ನು ಕೇರಳ ಸಮರ್ಪಕವಾಗಿ ಪಡೆದುಕೊಳ್ಳುತ್ತಿಲ್ಲ ಎಂಬ ಅಂಕಿ ಅಂಶಗಳು ಹೊರಬಿದ್ದಿವೆ.
ಕಳೆದ ಕೆಲವು ತಿಂಗಳುಗಳಲ್ಲಿ ಕೇರಳವು ಅಕ್ಕಿಯ ಪ್ರಮಾಣವನ್ನು 17,000 ಟನ್‍ಗಳಷ್ಟು ಮತ್ತು ಗೋಧಿಯ ಪ್ರಮಾಣವನ್ನು 400 ಟನ್‍ಗಳಷ್ಟು ಕಡಮೆ ಮಾಡಿದೆ.
ಕೇಂದ್ರವು ತಿಂಗಳಿಗೆ 1.03 ಲಕ್ಷ ಟನ್ ಅಕ್ಕಿ ಮತ್ತು 15,629 ಟನ್ ಗೋಧಿಯನ್ನು ಕೇರಳಕ್ಕೆ ನೀಡುತ್ತಿದೆ. ಸಪ್ಲೈಕೋ ಕೇರಳದ ಭಾರತೀಯ ಆಹಾರ ನಿಗಮದ 27 ಡಿಪೋಗಳಿಂದ ಖರೀದಿಸುತ್ತದೆ ಮತ್ತು ಪಡಿತರವನ್ನು ಅಂಗಡಿಗಳಿಗೆ ತಲುಪಿಸುತ್ತದೆ. ಕೇರಳದ ಸಾಲದ ಬಿಕ್ಕಟ್ಟಿನಿಂದಾಗಿ ವಿತರಣೆಯ ಸಾರಿಗೆ ಗುತ್ತಿಗೆ ಬಿಲ್ ಬಾಕಿ ಉಳಿದಿದೆ. ಇದು ಪಡಿತರ ಹಂಚಿಕೆಯಲ್ಲಿನ ಕೊರತೆಗೆ ಪ್ರಮುಖ ಕಾರಣವಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಮೇ ತಿಂಗಳಿನಿಂದ ಪಡಿತರ ಹಂಚಿಕೆಯಲ್ಲಿ ಇಳಿಕೆಯಾಗಿದೆ.