ಪಟ್ನಾ: ಗಾಂಧಿ ಜಯಂತಿಯಂದು (ಅಕ್ಟೋಬರ್ 2) ಬಿಹಾರದಲ್ಲಿ 'ಜನ್ ಸುರಾಜ್' ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದಾರೆ.
ಪಟ್ನಾ: ಗಾಂಧಿ ಜಯಂತಿಯಂದು (ಅಕ್ಟೋಬರ್ 2) ಬಿಹಾರದಲ್ಲಿ 'ಜನ್ ಸುರಾಜ್' ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದ 'ಜನ್ ಸೂರಜ್'ನ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಕಿಶೋರ್ ಮಾತನಾಡಿದ್ದಾರೆ.
'ನಾನು ಈ ಹಿಂದೆಯೇ ಹೇಳಿದಂತೆ 'ಜನ್ ಸುರಾಜ್' ಅಕ್ಟೋಬರ್ 2ರಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಮುಂಬರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ. ಪಕ್ಷದ ನಾಯಕತ್ವದಂತಹ ವಿವರಗಳನ್ನು ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುತ್ತದೆ' ಎಂದು ಕಿಶೋರ್ ಹೇಳಿದ್ದಾರೆ.
ಕಿಶೋರ್ ಅವರು ಎರಡು ವರ್ಷಗಳ ಹಿಂದೆಯೇ ಪ್ರಚಾರವನ್ನು ಪ್ರಾರಂಭಿಸಿದ್ದರು. ಅವರಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ಕಿರಿಯ ಪುತ್ರ ವೀರೇಂದ್ರ ನಾಥ್ ಠಾಕೂರ್ ಮತ್ತು ಪುತ್ರಿ ಜಾಗೃತಿ ಠಾಕೂರ್ ಸಾಥ್ ನೀಡಿದ್ದರು.
ದಿವಂಗತ ಕರ್ಪೂರಿ ಠಾಕೂರ್ ಅವರ ಹಿರಿಯ ಪುತ್ರ ರಾಮ್ ನಾಥ್ ಠಾಕೂರ್ ಅವರು ಜೆಡಿಯು ಸಂಸದ ಮತ್ತು ಕೇಂದ್ರದ ರಾಜ್ಯ ಖಾತೆ ಸಚಿವರಾಗಿದ್ದಾರೆ.
ಅಶಿಸ್ತಿನ ಆಧಾರದ ಮೇಲೆ ಇತ್ತೀಚೆಗೆ ವಿಧಾನ ಪರಿಷತ್ತಿಗೆ ಅನರ್ಹಗೊಂಡಿದ್ದ ಆರ್‌ಜೆಡಿ ಮಾಜಿ ಎಂಎಲ್‌ಸಿ ರಂಬಾಲಿ ಸಿಂಗ್ ಚಂದ್ರವಂಶಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರು ಈಗಾಗಲೇ 'ಜನ್ ಸುರಾಜ್' ಜತೆ ಗುರುತಿಸಿಕೊಂಡಿದ್ದಾರೆ.