ಬದಿಯಡ್ಕ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಡ್ಡಿಯಡ್ಕ ವಲಯದ ವತಿಯಿಂದ ಬದಿಯಡ್ಕದ ಮೂಕಂಪಾರೆ ಸಮೀಪವಿರುವ ರುದ್ರಭೂಮಿಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿದರು ದ.ಗ್ರಾ ಯೋಜನಾಧಿಕಾರಿ ಮುಕೇಶ್, ವಲಯದ ಮೇಲ್ವಿಚಾರಕರ ಗೋಪಾಲಕೃಷ್ಣ., ಕೃಷಿ ಅಧಿಕಾರಿ ಬಾಲಕೃಷ್ಣ, ಒಕ್ಕೂಟ ಅಧ್ಯಕ್ಷ ತಾರನಾಥ ರೈ, ಜಯರಾಮ ಪಾಟಾಳಿ. ರೋಹಿತಾಕ್ಷ ನವಜೀವನ ಸಮಿತಿ ಸದಸ್ಯರು ಒಕ್ಕೂಟ ಅಧ್ಯಕ್ಷರು, ಸೇವಾಪ್ರತಿನಿಧಿ ಕವಿತಾ ರೈ, ಶೌರ್ಯ ವಿಪತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.