ಪತ್ತನಂತಿಟ್ಟ: ಪತ್ತನಂತಿಟ್ಟ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಹಿನ್ನೆಲೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.
ಭಾರತೀಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆಯ ಅನುಸಾರ ಮೂಲಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗೆ ಕಾಲೇಜಿನಿಂದ ಆರಂಭಗೊAಡ ವಿದ್ಯಾರ್ಥಿಗಳ ಪ್ರತಿಭಟನೆ ಜನರಲ್ ಆಸ್ಪತ್ರೆ ಮೂಲಕ ಪತ್ತನಂತಿಟ್ಟದ ಸಚಿವರ ಕಚೇರಿಗೆ ತೆರಳಿತು.
ಹಾಸ್ಟೆಲ್ ಸೌಲಭ್ಯದ ಕೊರತೆಯಿಂದ ಎಸ್‌ಟಿ ವಿದ್ಯಾರ್ಥಿ ಆರ್ಥಿಕ ಹೊರೆಯಿಂದ ವಿದ್ಯಾಭ್ಯಾಸವನ್ನೇ ನಿಲ್ಲಿಸಿದ್ದಾನೆ ಎಂಬುದು ಪೋಷಕರ ಆರೋಪ. ವಿಪಕ್ಷ ಯುವ ಸಂಘಟನೆಗಳು ಕೂಡ ನರ್ಸಿಂಗ್ ಕಾಲೇಜಿನ ವಿಷಯವನ್ನು ಕೈಗೆತ್ತಿಕೊಂಡು ಪ್ರತಿಭಟನೆ ಆರಂಭಿಸಿದ್ದು, ವಯನಾಡಿನ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದು ಓದು ನಿಲ್ಲಿಸಿದ್ದಾನೆ. ಕಾರಣ ಆರ್ಥಿಕ ಹೊರೆ. ಭಾರತೀಯ ನರ್ಸಿಂಗ್ ಕೌನ್ಸಿಲ್ ಅನುಮೋದಿಸದ ಕಾರಣ ಇ-ಅನುದಾನ ಲಭ್ಯವಾಗುತ್ತಿಲ್ಲ.
ಸರ್ಕಾರಿ ಕಾಲೇಜಾಗಿದ್ದರೂ ಹಾಸ್ಟೆಲ್ ಸೌಲಭ್ಯವಿಲ್ಲ. ದುಡ್ಡು ಖರ್ಚು ಮಾಡಿ ಖಾಸಗಿ ಹಾಸ್ಟೆಲ್ ಗಳಲ್ಲಿ ಹೊರಗಡೆ ಇರಬೇಕಾಗಿದೆ. ಕಾಲೇಜಿಗೆ ಸ್ವಂತ ಬಸ್ ಇಲ್ಲ. ಸ್ವಂತ ಖರ್ಚಿನಲ್ಲಿ ಆಸ್ಪತ್ರೆಗಳಲ್ಲಿ ತರಬೇತಿಗೆ ಹೋಗಬೇಕಾಗುತ್ತಿದೆ. ಇದೆಲ್ಲ ಸಾಮಾನ್ಯ ವಿದ್ಯಾರ್ಥಿಗಳ ಕೈಗೆಟುಕುವಂತಿಲ್ಲ. ಕಳೆದ ವರ್ಷ ಐಎನ್‌ಸಿ ಅನುಮೋದನೆ ಸಿಗುತ್ತದೆ ಎಂದು ನಂಬಿ ಆರೋಗ್ಯ ಸಚಿವರ ಸ್ವಂತ ಕ್ಷೇತ್ರದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಕಾರ್ಯಾರಂಭ ಮಾಡಿತ್ತು. ಕೊನೆಗೆ ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಆರೋಗ್ಯ ವಿವಿ ಪರೀಕ್ಷಾ ಫಲಿತಾಂಶ ತಡೆ ಹಿಡಿದಿದ್ದು ವಿದ್ಯಾರ್ಥಿಗಳ ಹಿನ್ನಡೆಗೂ ಕಾರಣವಾಯಿತು.