ಕುಂಬಳೆ: ವಾಚನ ಪಕ್ಷಾಚರಣೆಯ ಅಂಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಕೆ.ದಾಮೋದರನ್ ರವರ ಸಂಸ್ಮರಣ ಕಾರ್ಯಕ್ರಮ ಬಾಡೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ. ಅಹ್ಮದ್ ಹುಸೈನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಡಾ.ವಿನೋದ್ ಕುಮಾರ್ ಪೆರುಂಬಳ ಸಂಸ್ಮರಣಾ ಭಾಷಣ ಮಾಡಿದರು.
ಪುತ್ತಿಗೆ ಗ್ರಾಮ ಪಂಚಾಯತಿ ನೇತೃತ್ವ ಸಮಿತಿ ಅಧ್ಯಕ್ಷ ಪೃತ್ವಿರಾಜ್, ಬಿ.ಕೆ. ಮೊಹಮ್ಮದ್ ಮಾಸ್ತರ್ ಗ್ರಂಥಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಪ್ರಭಾಕರ್ ಹಾಗು ಕುಟುಂಬಶ್ರೀ ಸಿ.ಡಿ.ಎಸ್. ಸುಂದರಿ ಮಾತನಾಡಿದರು. ನವಚೇತನ ಲೈಬ್ರರಿ ಅಧ್ಯಕ್ಷ ವಿಖ್ಯಾತ್ ರೈ ಸ್ವಾಗತಿಸಿ, ಕಾರ್ಯದರ್ಶಿ ಪೂರ್ಣಚಂದ್ರ.ಎಂ. ವಂದಿಸಿದರು.