ಮಂಜೇಶ್ವರ: ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಇವರ ಆಶ್ರಯದಲ್ಲಿ ನಡೆಯುವ 13 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಹೊಸಂಗಡಿ ಮೊಸರು ಕುಡಿಕೆಯ ಆಮಂತ್ರಣವನ್ನು ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಗೌರವಾಧ್ಯಕ್ಷ ನ್ಯಾಯವಾದಿ ನವೀನ್ ರಾಜ್, ಶ್ರೀ ಕ್ಷೇತ್ರದ ಅರ್ಚಕ ತಿರುಮಲೇಶ್ ಆಚಾರ್ಯ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಆಶಾಲತಾ ಬಿ.ಎಂ, ದಿನಕರ್ ಬಿ.ಎಂ, ಚಂದ್ರಹಾಸ ಪೆಲಪ್ಪಾಡಿ, ವೀಣಾ ಚಂದ್ರಹಾಸ್, ರೋಹಿತ್ ಬಿ.ಎಂ, ಅಶ್ವಿನಿ ರೋಹಿತ್, ಸುನೀಲ್ ಗಾಣಿಗ, ಜಯಪ್ರಕಾಶ್, ನಮೃತ ಜಯಪ್ರಕಾಶ್ ಹಾಗು ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.