ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿಧೆಡೆ ನಾಶನಷ್ಟ ಸಂಭವಿಸಿದೆ. ಈಗಾಗಲೇ ಸಮುದ್ರ ಕೊರೆತ ಹೆಚ್ಚಾಗಿದ್ದು, ಉಪ್ಪಳ ಶಾರದನಗರ, ಕುಂಬಳೆ ನಾಂಗಿ, ಮೊಗ್ರಾಲ್‍ಪುತ್ತೂರು ಸೇರಿದಂತೆ ವಿವಿಧೆಡೆ ಕರಾವಳಿಯಲ್ಲಿ ಮನೆಗಳು ಹಾಗೂ ತೆಂಗಿನ ಮರಗಳು ಸಮುದ್ರಪಾಲಾಗಿದೆ.
ನಿರಂತರ ಸುರಿಯುವ ಮಳೆಗೆ ಉಪ್ಪಳ ಭಗವತಿ ಗೇಟ್ ಸನಿಹ ಸಾರ್ವಜನಿಕ ಬಾವಿಯೊಂದು ಕುಸಿದು ಬಿದ್ದಿದೆ. ಮಂಗಲ್ಪಾಡಿ ಗ್ರಮ ಪಂಚಾಯಿತಿ ಅಧೀನದಲ್ಲಿರುವ ಈ ಸಾರ್ವಜನಿಕ ಬಾವಿಯನ್ನು ಹಲವು ಮಂದಿ ನೀರಿಗಾಗಿ ಆಶ್ರಯಿಸುತ್ತಿದ್ದರು. ಕಳೆದ 50ವರ್ಷಗಳಿಂದ ಆಸುಪಾಸಿನ 15ಕ್ಕೂ ಹೆಚ್ಚು ಕುಟುಂಬ ಈ ಬಾವಿ ನೀರನ್ನು ಕುಡಿಯಲು ಹಾಗೂ ಇತರ ಬಳಕೆಗಾಗಿ ಉಪಯೋಗಿಸುತ್ತಿದ್ದು, ಸೋಮವಾರ ಬೆಳಗ್ಗೆ ಆಸುಪಾಸಿನವರು ನೀರಿಗಾಗಿ ಆಗಮಿಸಿದಾಗ ಬಾವಿ ನಾಪತ್ತೆಯಾಗಿತ್ತು.