HEALTH TIPS

ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟು?: ಲೆಕ್ಕವಿಲ್ಲವೆಂದು ವಿಧಾನಸಭೆಯಲ್ಲಿ ತಿಳಿಸಿದ ರಾಜ್ಯ ಸರ್ಕಾರ!

                ತಿರುವನಂತಪುರಂ: ರಾಜ್ಯದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ ವಿಚಾರಿಸಿದಾಗ ರಾಜ್ಯ ಸರ್ಕಾರ ನಿರುತ್ತರವಾಯಿತು.  ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ಶಿವನ್ ಕುಟ್ಟಿ, ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ ಎಂಬ ಲೆಕ್ಕ ಸರ್ಕಾರದ ಬಳಿ ಇಲ್ಲ ಎಂದಿರುವರು.

                 ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿಯಾದವರ ಹೆಸರಿನ ಮಾಹಿತಿ ಮಾತ್ರ ಸರ್ಕಾರದ ಬಳಿ ಇದೆ. 31 ಮಾರ್ಚ್ 2024 ರವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ 256 ಲಕ್ಷ ಜನರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

                ಇದೇ ವೇಳೆ, ಇತ್ತೀಚೆಗೆ ಬಿಡುಗಡೆಯಾದ ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ, 15-29 ವಯೋಮಾನದ ಜನರ ವಿಷಯದಲ್ಲಿ ಕೇರಳ ದೇಶದ ನಿರುದ್ಯೋಗ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದೆ. 

               ಕಾರ್ಮಿಕರ ಜನಸಂಖ್ಯೆಯ ಅನುಪಾತದಲ್ಲಿ, ಕೇರಳವು ಹೆಚ್ಚಿನ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಗಿಂತ ಹಿಂದುಳಿದಿದೆ. ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 2022-2023ರಲ್ಲಿ 50.5 ಶೇ. ಕಾರ್ಮಿಕ ಜನಸಂಖ್ಯೆಯ ಅನುಪಾತದೊಂದಿಗೆ ಕೇರಳವು ದೇಶದ 28 ರಾಜ್ಯಗಳಲ್ಲಿ 23 ನೇ ಸ್ಥಾನದಲ್ಲಿದೆ. ನಂತರ ಬಿಹಾರ, ದೆಹಲಿ, ಗೋವಾ, ಹರಿಯಾಣ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries