HEALTH TIPS

ಕೇರಳ ಸರ್ಕಾರಿ ಸೇವೆ: ಸಮುದಾಯವಾರು ಪ್ರಾತಿನಿಧ್ಯದಲ್ಲಿ ಅಸಮಾನತೆ - ವರದಿ

          ತಿರುವನಂತಪುರ: ಕೇರಳದ ಸರ್ಕಾರಿ ನೌಕರರ ಸಮುದಾಯವಾರು ಪ್ರಾತಿನಿಧ್ಯದಲ್ಲಿ ಅಸಮಾನತೆಯಿದ್ದು, ವಿಶೇಷವಾಗಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಕಡಿಮೆಯಿದೆ ಎಂಬುದನ್ನು ಸರ್ಕಾರಿ ಸಂಸ್ಥೆಯ ವರದಿಯೊಂದು ಬಹಿರಂಗಪಡಿಸಿದೆ.

           ರಾಜ್ಯ ವಿಧಾನಸಭೆಗೆ ನೀಡಲಾಗಿರುವ ಮಾಹಿತಿ ಪ್ರಕಾರ, ಕೇರಳದಲ್ಲಿ ಒಟ್ಟು 5,45,423 ಸರ್ಕಾರಿ ನೌಕರರಿದ್ದು, ಇದರಲ್ಲಿ 73,774 ಮುಸ್ಲಿಮರಾಗಿದ್ದಾರೆ.

            ಅಂದರೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಶೇ 13.5ರಷ್ಟಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 26.5ರಷ್ಟಿದೆ.

            ರಾಜ್ಯದಲ್ಲಿ ಜಾತಿಗಣತಿಗೆ ಬೇಡಿಕೆ ಹೆಚ್ಚುತ್ತಿರುವಾಗಲೇ ಸರ್ಕಾರಿ ನೌಕರರ ಜಾತಿವಾರು ಮಾಹಿತಿ ಮತ್ತು ಅದರಲ್ಲಿನ ಅಸಮಾನತೆಯ ಅಂಕಿ ಅಂಶಗಳು ಹೊರಬಿದ್ದಿವೆ. ಕೇರಳ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಈ ಕುರಿತ ದತ್ತಾಂಶವನ್ನು ಸಂಗ್ರಹಿಸಿದೆ.

               ಈ ಸಂಬಂಧ ವಿಧಾನಸಭೆಯಲ್ಲಿ ಪ್ರಶ್ನಿಸಿದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್ ಶಾಸಕ ಪಿ. ಉಬೈದುಲ್ಲಾ, ಜನಸಂಖ್ಯೆಗೆ ಹೋಲಿಸಿದರೆ ಮುಸ್ಲಿಂ ಸಮುದಾಯಗಳ ಪ್ರಾತಿನಿಧ್ಯ ಕಡಿಮೆ ಇದೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ ಎಂದಿದ್ದಾರೆ.

            ಕೇರಳದಲ್ಲಿ ಮುಂದುವರಿದ ನಾಯರ್‌ಗಳು ಮತ್ತು ಸಂಬಂಧಿತ ಸಮುದಾಯಗಳಿಗೆ ಸೇರಿದ 1,08,012 (ಶೇ 19.8) ಮಂದಿ ಸರ್ಕಾರಿ ನೌಕರಿಯಲ್ಲಿದ್ದಾರೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ನಾಯರ್‌ ಜನಸಂಖ್ಯೆ ಶೇ 14ರಷ್ಟಿದೆ.

             ಒಬಿಸಿ ಪ್ರವರ್ಗದಲ್ಲಿ ಬರುವ ಹಿಂದೂ-ಈಜವ ಸಮುದಾಯದ 1,15,075 (ಶೇ 21.09) ಮಂದಿ ಸರ್ಕಾರಿ ಸೇವೆಯಲ್ಲಿದ್ದಾರೆ. ಆದರೆ ಈ ಸಮುದಾಯವು ರಾಜ್ಯದ ಜನಸಂಖ್ಯೆಯ ಶೇ 23ರಷ್ಟಿದೆ.

ಕ್ರಿಶ್ಚಿಯನ್‌ನ ಮುಂದುವರಿದ ಸಮುದಾಯಗಳು 73,713 (ಶೇ 13.5) ಮತ್ತು ಲ್ಯಾಟಿನ್‌ ಕ್ಯಾಥೋಲಿಕ್‌/ಲ್ಯಾಟಿನ್‌ ಕ್ರಿಶ್ಚಿಯನ್ನರು 22,542 (ಶೇ 4.13)ರಷ್ಟಿದ್ದಾರೆ. ಕೇರಳ ಜನಸಂಖ್ಯೆಯಲ್ಲಿ ಶೇ 18.3ರಷ್ಟು ಕ್ರೈಸ್ತರಿದ್ದಾರೆ.

                ಒಟ್ಟು 5,45,423 ನೌಕರರಲ್ಲಿ 1,96,837 ಸಾಮಾನ್ಯ ವರ್ಗ, 2,85,335 ಒಬಿಸಿ, 51,783 ಎಸ್‌.ಸಿ, 10,513 ಎಸ್‌.ಟಿ ಸಮುದಾಯದವರು ಇದ್ದಾರೆ. 955 ನೌಕರರು ಯಾವುದೇ ವರ್ಗವನ್ನು ನಮೂದಿಸಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries