ಪೆರ್ಲ: ಅಮೆರಿಕದ ಶಿಕಾಗೋ ನಗರದಲ್ಲಿ ಮೈಸೂರಿನ ದತ್ತ ಪೀಠ ವತಿಯಿಂದ ಜುಲೈ ೧೮ರಿಂದ ೨೧ವರೆಗೆ ಆಯೋಜಿಸಲಾದ ೯ನೇ ವರ್ಷದ ಗೀತಾ ಯಜ್ಞ ಅಂಗವಾಗಿ ಸಂಪೂರ್ಣ ಭಗವದ್ಗೀತೆಯನ್ನು ೯ ತಿಂಗಳಲ್ಲಿ ಕಂಠಪಾಠ ಮಾಡುವ ಮೂಲಕ ಪೆರ್ಲ ಸನಿಹದ ಕೊಡೆಂಕಿಲ ಮೂಲದ ೬ ವರ್ಷದ ಬಾಲಕಿ ಶ್ರಿಯಾ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಚಿನ್ನದ ಪದಕ ಪಡೆದಿದ್ದಾಳೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರಮಾಣ ಪತ್ರ ಹಾಗೂ ಪದಕ ನೀಡಿ ಶ್ರಿಯಾಳನ್ನು ಆಶೀರ್ವದಿಸಿದ್ದಾರೆ. ಅಮೆರಿಕ ದೇಶದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದ ಶ್ರಿಯಾ, ರವಿಶಂಕರ ಕೊಡೆಂಕಿಲ ಮತ್ತು ಶೈಲಿ ದಂಪತಿ ಪುತ್ರಿ.