ಪೆರ್ಲ : ಎಣ್ಮಕಜೆ ಮಂಡಲ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ಅವರ ಪ್ರಥಮ ವರ್ಷದ ಸಂಸ್ಮರಣೆ ಪೆರ್ಲದ ಇಂದಿರಾ ಭವನದಲ್ಲಿ ನಿನ್ನೆ ಜರಗಿತು.
ಚಾಂಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್,ರವೀಂದ್ರನಾಥ ನಾಯಕ್ ಶೇಣಿ,ವಿಲ್ಫ್ರೆಡ್ ಡಿಸೋಜ, ಶ್ರೀನಿವಾಸ ಶೆಣೈ, ಕರೀಂ ಕಾಟುಕುಕ್ಕೆ, ಮಾಯಿಲ ನಾಯ್ಕ್, ಅಬ್ದುಲ್ ರಸಾಕ್ ಪೆರ್ಲ, ಅಮು ಅಡ್ಕಸ್ಥಳ, ರಸಾಕ್ ನಲ್ಕ ,ಲಕ್ಷ್ಮಣ ಪಡ್ಪು ಮೊದಲಾದವರು ಭಾಗವಹಿಸಿದ್ದರು.