ಕಾಸರಗೋಡು : ಎಸ್ಸೆಸೆಲ್ಸಿಯಲ್ಲಿ ಶೇ. ನೂರು ಫಲಿತಾಂಶ ದಾಖಲಿಸಿದ ಕಾಸರಗೋಡು ಬಿಇಎಂ ಹೈಯರ್‍ಸೆಕೆಂಡರಿ ಶಾಲೆಗೆ ಹಾಗೂ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ 46 ವಿದ್ಯಾರ್ಥಿಗಳಿಗೆ ನಗರಸಭೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜರುಗಿತು.
ಶಾಲೆಗೆ ವಿಶೇಷ ಸ್ಮರಣಿಕೆ ಹಾಗೂ ಮಕ್ಕಳಿಗೆ ನೆನಪಿನ ಕಾಣಿಕೆಮತ್ತು ಪದಕ ನೀಡಿ ಗೌರವಿಸಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಮಾರಂಭ ಉದ್ಘಾಟಿಸಿ, ಸ್ಮರಣಿಕೆ ವಿತರಿಸಿದರು. ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಜಾಹಿರಿ ಆರೀಫ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ರೀತಾ, ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿಯಾನ ಹನೀಫ್, ನಗರಸಭೆ ಉಪಾಧ್ಯಕ್ಷೆ ಶಂಸೀದಾ ಫಿರೋಜ್, ನಗರ ಸಭಾ ಕಾರ್ಯದರ್ಶಿ ಜಸ್ಟಿನ್ ಅಗಸ್ಟಿನ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ನಗರಸಭೆ ಇಂಜಿನಿಯರ್ ದಿಲೀಶ್ ಉಪಸ್ಥಿತರಿದ್ದರು. ಬಿಇಎಂ ಶಾಲೆಯ ಪರವಾಗಿ ಶಿಕ್ಷಕ ಯಶವಂತ ವೈ,
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಪಿಟಿಎ ಅಧ್ಯಕ್ಷ ರವಿಶಂಕರ್ ಸಿ ಎಚ್, ಎಮ್‍ಪಿಟಿಎ ಅಧ್ಯಕ್ಷೆ ಶಾರದಾ ಅವರು ಸ್ಮರಣಿಕೆ ಪಡೆದುಕೊಂಡರು. ದಿಲೀಶ್ ವಂದಿಸಿದರು.