ವಯನಾಡ್: ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಪ್ರಾಕೃತಿಕ ವಿಕೋಪದಿಂದ ತತ್ತರಿಸುತ್ತಿರುವ ವಯನಾಡಿನ ಜನತೆಗೆ ಸಾಂತ್ವನದ ಮಾತುಗಳನ್ನು ಹೇಳಿದರು.
ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಟಿಪ್ಪಣಿಯು ಕೇರಳದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದಾದ ವಯನಾಡಿನ ದುರಂತದ ಪೂರ್ವ ದೃಶ್ಯಗಳನ್ನು ಹಂಚಿಕೊAಡಿದೆ.
ವಯನಾಡ್ ಭೂಮಿಯ ಮೇಲಿನ ಸ್ವರ್ಗ. ಭೂಕುಸಿತದಲ್ಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದು ದುರಂತ. ನಮ್ಮ ಹೃದಯವು ವಯನಾಡ್ ಜನರೊಂದಿಗೆ ಇದೆ ಮತ್ತು ನಾವು ಪರಿಹಾರ ಕಾರ್ಯದಲ್ಲಿ ನಮ್ಮ ಕೈಲಾದಷ್ಟು ನೆರವು ನೀಡುತ್ತೇವೆ ಎಂದು ಆನಂದ್ ಮಹೀಂದ್ರ ಬರೆದಿದ್ದಾರೆ.
ವಯನಾಡಿನ ಮುಂಡಕೈ, ಚುರಲ್ಮಲಾ ಮತ್ತು ಅಟ್ಟಮಲ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ ೫೦ ಜನರು ಸಾವನ್ನಪ್ಪಿದ್ದಾರೆ. ಅನೇಕ ಜನರು ಕಾಣೆಯಾಗಿದ್ದಾರೆ. ಭೂ, ವಾಯು ಮತ್ತು ನೌಕಾ ಪಡೆಗಳು ರಕ್ಷಣಾ ಕಾರ್ಯಾಚರಣೆಗಾಗಿ ವಯನಾಡಿನಲ್ಲಿ ಕಾರ್ಯಚಟುವಟಿಕೆ ಕೈಗೆತ್ತಿಕೊಂಡಿದ್ದಾರೆ.