HEALTH TIPS

ಶಬರಿ ಮಾರ್ಗ: ಅನಿಶ್ಚಿತತೆಯಿಂದ ಹಣ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ: ಅಶ್ವಿನಿ ವೈಷ್ಣವ್

                   ತಿರುವನಂತಪುರ: ಕೇರಳದ ಬಹುದೊಡ್ಡ ರೈಲ್ವೆ ಅಭಿವೃದ್ಧಿ ಕನಸುಗಳಲ್ಲಿ ಒಂದಾದ ಶಬರಿ ಪಥಕ್ಕೆ ಬಜೆಟ್ ನಲ್ಲಿ ೧೦೦ ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

                     ಆದರೆ ರಾಜ್ಯದಿಂದ ವೆಚ್ಚ ಹಂಚಿಕೆಗೆ ಸಂಬAಧಿಸಿದAತೆ ಅನಿಶ್ಚಿತತೆ ಇರುವುದರಿಂದ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ಥೈಕ್ಕಾಡ್ ರೈಲ್ವೆ ಪ್ರಧಾನ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

                   ಶೋರ್ನೂರ್ ಎರ್ನಾಕುಳಂ ೩ನೇ ಲೇನ್‌ಗೆ ೫೧೬ ಕೋಟಿ ರೂ. ಮೀಸಲಿಡಲಾಗಿದೆ. ತಿರುವನಂತಪುರ ಕನ್ಯಾಕುಮಾರಿ ರಸ್ತೆ ಡಬ್ಲಿಂಗ್ ಕಾಮಗಾರಿಯನ್ನು ಆದಷ್ಟು  ಬೇಗ ಪೂರ್ಣಗೊಳಿಸಲಾಗುವುದು. ೩೬೫ ಕೋಟಿ ವೆಚ್ಚದ ಕಾಮಗಾರಿಗಳನ್ನು ಈ ವರ್ಷ ಪೂರ್ಣಗೊಳಿಸಬಹುದು ಎಂದು ರೈಲ್ವೆ ಅಂದಾಜಿಸಿದೆ. ಎರ್ನಾಕುಳಂ ಕುಂಬಳA ೨ನೇ ಸಾಲಿಗೆ ೧೦೫ ಕೋಟಿ ಮತ್ತು ಕುಂಬಳA ತುರವೂರ್ ೨ನೇ ಸಾಲಿಗೆ ೧೦೨ ಕೋಟಿ ಮೀಸಲಿಡಲಾಗಿದೆ.

                 ಸಣ್ಣ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ವಿವಿಧ ಯೋಜನೆಗಳನ್ನು ಯೋಜಿಸಲಾಗುತ್ತಿದೆ. ಆಲಪ್ಪುಳ, ಅಂಗಡಿಪುರA, ಅಂಗಮಾಲಿ, ಚಾಲಕುಡಿ, ಚಂಗನಾಶ್ಶೇರಿ, ಚೆಂಗನ್ನೂರ್, ಚಿರೈಂಕೀಶ್, ಎರ್ನಾಕುಳಂ ಟೌನ್, ಏಟಮನೂರ್, ಫೆರೂಕ್, ಗುರುವಾಯೂರ್, ಕಣ್ಣೂರು, ಕಾಸರಗೋಡು, ಕಾಯಂಕುಳA ಜಂಕ್ಷನ್, ಕೊಲ್ಲಂ ಜಂಕ್ಷನ್, ಕೋಝಿಕ್ಕೋಡ್ ಮೇನ್, ಕುಟ್ಟಿಪುರಂ, ಮಾವೇಲಿಕರ, ನಿಲಂಬೂರ್ ರಸ್ತೆ, ತಲಮಬುರ್ ರಸ್ತೆ ಪಯ್ಯನ್ನೂರ್, ಪುನಲೂರ್, ಶೋರ್ನೂರ್ ಜಂಕ್ಷನ್, ತಲಶ್ಶೇರಿ, ತಿರುವನಂತಪುರA, ತ್ರಿಶೂರ್, ತಿರೂರ್, ತಿರುವಲ್ಲಾ, ತ್ರಿಪುಣಿತುರಾ, ವಡಕರ, ವರ್ಕಲ ಮತ್ತು ವಡಕಂಚೇರಿ ನಿಲ್ದಾಣಗಳಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ.

                ೨೦೧೪ ರಿಂದ ರಾಜ್ಯದಲ್ಲಿ ೧೦೬ ರೈಲ್ವೆ ಓವರ್ ಬ್ರಿಡ್ಜ್ಗಳು ಮತ್ತು ಅಂಡರ್ ಬ್ರಿಡ್ಜ್ಗಳನ್ನು ನಿರ್ಮಿಸಲಾಗಿದೆ. ತಿರುವನಂತಪುರ, ಎರ್ನಾಕುಳಂ, ಕೊಲ್ಲಂ, ಗುರುವಾಯೂರ್, ತೃಶೂರ್, ಪುನಲೂರ್, ಚಾಲಕುಡಿ, ಕೋಝಿಕ್ಕೋಡ್ ಮತ್ತು ಅಲಪ್ಪುಳ ಸೇರಿದಂತೆ ೩೫ ರೈಲು ನಿಲ್ದಾಣಗಳನ್ನು ಅಮೃತ ಭಾರತ್ ರೈಲ್ವೇಸ್ ಆಗಿ ಮೇಲ್ದರ್ಜೆಗೇರಿಸಲಾಗುವುದು. ತಿರುವನಂತಪುರA ಸೆಂಟ್ರಲ್ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲ್ದಾಣದ ಯೋಜನೆ ಮತ್ತು ಪ್ರಮುಖ ಪುನರಾಭಿವೃದ್ಧಿ ಕಾರ್ಯಗಳು ಈ ವರ್ಷ ಪ್ರಾರಂಭವಾಗಲಿವೆ. ದಕ್ಷಿಣ ರೈಲ್ವೆ ತಿರುವನಂತಪುರAನ ವಿಭಾಗೀಯ ವ್ಯವಸ್ಥಾಪಕರು ಮಾತನಾಡಿ, ವಳ್ಳತ್ತೋಳ್ ನಗರ ಎರ್ನಾಕುಳಂ ವಿಭಾಗದಲ್ಲಿ ಆಧುನಿಕ ಸಿಗ್ನಲಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮನೀಶ್ ತಪ್ಲ್ಯಾಲ್ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries