ಕೊಟ್ಟಾಯಂ: ಆಡಳಿತಾರೂಢ ಶಿಕ್ಷಕರ ಪರವಾದ ಕೆಎಸ್‌ಟಿಎ ಸಂಘಟನೆಯು ಶೈಕ್ಷಣಿಕ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧವೇ ಪ್ರತಿಭಟಿಸಿ ಅಚ್ಚರಿ ಮೂಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಇಂದು ಕೆಲಸದ ದಿನವನ್ನಾಗಿ ಮಾಡಿರುವುದನ್ನು ವಿರೋಧಿಸಿ ಸಂಘಟನೆ ಪ್ರತಿಭಟನೆ ನಡೆಸಿತು. ವಿರೋಧ ಪಕ್ಷದ ಶಿಕ್ಷಕರ ಸಂಘಗಳ ಜಂಟಿ ಶಿಕ್ಷಕರ ಸಂಘ ಮತ್ತು ಬಿಜೆಪಿ ಪರ ಶಿಕ್ಷಕರ ಸಂಘ ಎನ್‌ಟಿಯು ಪ್ರತ್ಯೇಕ ಪ್ರತಿಭಟನೆಗಳನ್ನು ಆಯೋಜಿಸುತ್ತಿತ್ತು.
ವೈಜ್ಞಾನಿಕವಾಗಿ ಶೈಕ್ಷಣಿಕ ಕ್ಯಾಲೆಂಡರ್ ಪರಿಷ್ಕರಣೆ, ಸಹಭಾಗಿತ್ವ ಪಿಂಚಣಿ ಹಿಂಪಡೆಯುವುದು, ವೇತನ ಪರಿಷ್ಕರಣೆ ಬಾಕಿ ಮಂಜೂರಾತಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊAಡು ಆಡಳಿತ ಪಕ್ಷ ಕೆಎಸ್ ಟಿಎ ಸೆಕ್ರೆಟರಿಯೇಟ್ ವರೆಗೆ ಪಾದಯಾತ್ರೆ ನಡೆಸಿತು. ಸಿಐಟಿಯು ರಾಜ್ಯಾಧ್ಯಕ್ಷ ಟಿ.ಪಿ.ರಾಮಕೃಷ್ಣನ್ ಉದ್ಘಾಟಿಸಿದರು.
ಇಂದು ಶಾಲೆಯ ಕೆಲಸದ ದಿನವಾಗಿರುವುದರಿಂದ ಆಡಳಿತ-ಪ್ರತಿಪಕ್ಷ ಭೇದವಿಲ್ಲದೆ ಎಲ್ಲಾ ಶಿಕ್ಷಕರ ಸಂಘಗಳು ಮುಷ್ಕರ ನಡೆಸಿರುವುದರಿಂದ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಮೆಯಾಗಿತ್ತ.
ಈ ಮಧ್ಯೆ ಸ್ವಂತ ಲಾಭಕರವಾದ ವಿಷಯಗಳಲ್ಲಿ ರಾಜಕೀಯ ಪಕ್ಷಗಳಿಗಾಗಲಿ, ಸಂಘಟನೆಗಳಿಗಾಗಲಿ ಯಾವುದೇ ವಿರೋಧಿ ಮನೋಭಾವಗಳಿಲ್ಲದೆ, ಪರಸ್ಪರ ಹೆಗಲುಕೊಡುವ ಪರಿಪಾಠ ಜನಸಾಮಾನ್ಯರನ್ನು ಕುರಿಗಳಾಗಿಸುವ ತಂತ್ರವೆAಬುದು ಹೇಳಬೇಕಾಗಿಲ್ಲ.