ಕುಂಬಳೆ: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಸಾರ್ವಜನಿಕ ಅರಣ್ಯ ವಿಭಾಗ ಕಾಸರಗೋಡು ವಿಭಾಗ , ಮತ್ತು ಮೊಗ್ರಾಲ್ ಪುತ್ತೂರು ಶಾಲೆಯ ಪರಿಸರ ಕ್ಲಬ್ ಸಹಯೋಗದಲ್ಲಿ, ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಂಡ್ಲ ಗಿಡ ನೆಡುವ ಮೂಲಕ ವಿಶ್ವ ಕಾಂಡ್ಲ ದಿನವನ್ನು ಆಚರಿಸಲಾಯಿತು.
ಮೊಗ್ರಾಲ್ ಪುತ್ತೂರು ಹೊಳೆಯ ದಡ ಮತ್ತು ದ್ವೀಪಗಳಲ್ಲಿ ಸಸಿಗಳನ್ನು ನೆಟ್ಟು ಜಾಗೃತಿ ತರಗತಿ ನಡೆಸಲಾಯಿತು.
ಮಧುವಾಹಿನಿಯಂತೆ ಹರಿಯುವ ಮೊಗ್ರಾಲ್ ಪುತ್ತೂರು ಹೊಳೆಯು ನದೀಮುಖದಲ್ಲಿ ಸಮುದ್ರವನ್ನು ಸಂಧಿಸುತ್ತದೆ, ಅಲ್ಲಿ ವೈವಿಧ್ಯಮಯ ಕಾಂಡ್ಲ ಗಿಡಗಳು ಮತ್ತು ಸಂಬAಧಿತ ಪ್ರಭೇದಗಳೊಂದಿಗೆ ಸಣ್ಣ ಮತ್ತು ದೊಡ್ಡ ದ್ವೀಪಗಳಿವೆ, ಇದು ವಿಶಿಷ್ಟ ಮತ್ತು ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತದೆ. ಎಂದು ಪರಿಸರ ಕ್ಲಬ್ ಸಂಯೋಜಕ, ಅಧ್ಯಾಪಕ ಟಿ ವಿ ಜನಾರ್ಧನ್ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಸಾರ್ವಜನಿಕ ಅರಣ್ಯ ವಲಯ ಅರಣ್ಯಾಧಿಕಾರಿ ಕೆ.ಗಿರೀಶ್ ಉದ್ಘಾಟಿಸಿದರು. ಶಾಲಾ ಮುಖ್ಯಸ್ಥರಾದ ಬೀನಾ ಸಿ ಟಿ, ಉಪ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಮಾಹಿನ್ ಕುನ್ನಿಲ್, ವಲಯ ಅರಣ್ಯಾಧಿಕಾರಿಗಳಾದ ಕೆ.ಅನಿಲನ್ ಮತ್ತು ಕೆ.ಆರ್. ವಿಜಯನಾಥ್, ಶಿಕ್ಷಕರಾದ ವಿ.ಪಿ. ಶೆಹಸಿಲ್, ಪಿ.ಮಿರಾಜ್, ಅಂಜು ಎಂ.ಜೆ., ಅಖಿಲ್ ಮುಳಿಯಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿಗಳನ್ನು ನೀಡಿದರು. ಪರಿಸರ ಹೋರಾಟಗಾರ ಅನೂಪ್ ಕೆ.ಎಂ. ತರಗತಿ ನಡೆಸಿದರು.
ಪಿ ಟಿ ಎ ಅಧ್ಯಕ್ಷ ನೆಹರ್ ಕಡವತ್ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಕ್ಲಬ್ ಸಂಯೋಜಕ ಟಿ.ವಿ.ಜನಾರ್ದನನ್ ಸ್ವಾಗತಿಸಿ, ಸ್ನೇಹಭಾಸ್ಕರನ್ ವಂದಿಸಿದರು.