ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಯೋಜಿಸಿದ್ದ ವಾಚನಾ ಪಕ್ಷಾಚರಣೆಯ ಸಮಾರೋಪ ಮತ್ತು ಐ. ವಿ. ದಾಸ್ ಸಂಸ್ಮರಣೆ ಕಾರ್ಯಕ್ರಮ ತಾರೀಕು ಭಾನುವಾರ ವಿದ್ಯಾವರ್ಧಕ ಎ.ಯು.ಪಿ. ಶಾಲೆ ಮೀಯಪದವಿನಲ್ಲಿ ನಡೆಯಿತು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಕೆ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಂ. ಮೃದುಲಾ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ. ಅಹ್ಮದ್ ಹುಸೈನ್ ಮಾಸ್ತರ್ ಸಂಸ್ಮರಣಾ ಉಪನ್ಯಾಸ ನೀಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ, ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ವನಿತಾ ಆರ್. ಶೆಟ್ಟಿ, ಯೋಗೀಶ ಕೆ. (ಅಧ್ಯಕ್ಷರು, ನವಯವಕ ಕಲಾವೃಂದ ಗ್ರಂಥಾಲಯ, ಕುಳೂರು, ಚಿನಾಲ), ಸತೀಶ್ ಬಿ. (ಅಧ್ಯಕ್ಷರು, ಶ್ರೀ ವಿದ್ಯಾವರ್ಧಕ ಹಳೆಯ ವಿದ್ಯಾರ್ಥಿಗಳ ಸಂಘ ಗ್ರಂಥಾಲಯ, ಮೀಯಪದವು), ಸುರೇಶ್ ಬಂಗೇರ ಕೆ. (ಕಾರ್ಯದರ್ಶಿ, ಶ್ರೀ ವಿದ್ಯಾವರ್ದಕ ಹಳೆಯ ವಿದ್ಯಾರ್ಥಿಗಳ ಸಂಘ ಗ್ರಂಥಾಲಯ, ಮೀಯಪದವು) ಉಪಸ್ಥಿತರಿದ್ದರು. ತಾಲೂಕು ಲೈಬ್ರರಿ ಜತೆ ಕಾರ್ಯದರ್ಶಿ ಶ್ರೀ ಕುಮಾರಿ ಕೆ. ಸ್ವಾಗತಿಸಿ, ಮೀಂಜ ಪಂಚಾಯತಿ ಸಮಿತಿ ಸಂಚಾಲಕ ರಾಮಚಂದ್ರ ಟಿ. ವಂದಿಸಿದರು.