ಕೊಚ್ಚಿ: ಬುಧವಾರ ಸೇವೆ ಆರಂಭಿಸಲಿರುವ ಎರ್ನಾಕುಳಂ ಜಂಕ್ಷನ್-ಬೆAಗಳೂರು ಕಂಟೋನ್ಮೆ0ಟ್ ವಿಶೇಷ ವಂದೇಭಾರತ್ ಎಕ್ಸ್ ಪ್ರೆಸ್ ನ ಟಿಕೆಟ್ ದರವನ್ನು ಪ್ರಕಟಿಸಲಾಗಿದೆ.
ಎರ್ನಾಕುಳಂ ಜಂಕ್ಷನ್‌ನಿAದ ಬೆಂಗಳೂರು ಕಂಟೋನ್ಮೆAಟ್ ಟಿಕೆಟ್ ದರವು ಚೇರ್ ಕಾರ್‌ನಲ್ಲಿ ಆಹಾರ ಸೇರಿದಂತೆ ರೂ ೧೪೬೫ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ ರೂ ೨೯೪೫ ಆಗಿದೆ.
೬೨೦ ಕಿ.ಮೀ ದೂರವನ್ನು ೯ ಗಂಟೆ ೧೦ ನಿಮಿಷಗಳಲ್ಲಿ ಕ್ರಮಿಸುತ್ತದೆ. ಸೇಲಂ, ಈರೋಡ್, ತಿರುಪುರ್, ಪೊತ್ತನ್ನೂರ್, ಪಾಲಕ್ಕಾಡ್ ಮತ್ತು ತ್ರಿಶೂರ್‌ಗಳಲ್ಲಿ ನಿಲ್ದಾಣಗಳಿರಲಿವೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ನಿನ್ನೆಯಿಂದ ಬುಕ್ಕಿಂಗ್ ಆರಂಭವಾಗಿದೆ.
ಎರ್ನಾಕುಳಂನಿ0ದ ಬೆಂಗಳೂರಿಗೆ ಬುಕ್ಕಿಂಗ್ ಆರಂಭವಾಗಿದೆ. ಬೆಂಗಳೂರಿನಿAದ ರಿಟರ್ನ್ ಬುಕ್ಕಿಂಗ್ ಆರಂಭವಾಗಿಲ್ಲ. ಬೆಂಗಳೂರಿನ ಕಂಟೋನ್ಮೆ0ಟ್‌ನಿ0ದ ಬೆಳಗ್ಗೆ ೫.೩೦ಕ್ಕೆ ಹೊರಡಲಿದೆ. ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ ೨.೨೦ಕ್ಕೆ ಎರ್ನಾಕುಳಂ ತಲುಪಲಿದೆ.
ಎರ್ನಾಕುಳಂನಿAದ ಮಧ್ಯಾಹ್ನ ೧೨.೫೦ ಕ್ಕೆ ಹೊರಡುತ್ತದೆ. ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ರಾತ್ರಿ ೧೦ ಗಂಟೆಗೆ ಬೆಂಗಳೂರು ತಲುಪಲಿದೆ. ಈ ಸೇವೆಯು ಪ್ರಸ್ತುತ ಜುಲೈ ೩೧ ರಿಂದ ಆಗಸ್ಟ್ ೨೬ ರವರೆಗೆ ಚಾಲನೆಯಲ್ಲಿರಲಿದೆ.