ಕಾಸರಗೋಡು : ಹೊಸ ಶೈಕ್ಷಣಿಕ ವರ್ಷದ ಆರಂಭದನ್ವಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾ ಕ್ಯಾಂಪಸ್‍ಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಬರಮಾಡಿಕೊಲ್ಳುವ ಕಾರ್ಯಕ್ರಮ ಕ್ಯಾಂಪಸ್‍ನಲ್ಲಿ ನಡೆಯಿತು.
ಈ ವರ್ಷ ಒಟ್ಟು 774 ವಿದ್ಯಾರ್ಥಿಗಳು 25 ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದಾರೆ. ಅವರಲ್ಲಿ 530 ಮಂದಿ ಹುಡುಗಿಯರಿದ್ದು, ಒಡಿಶಾ, ಅಸ್ಸಾಂ, ಮಣಿಪುರ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ 18ರಾಜ್ಯಗಳ ವಿದ್ಯಾರ್ಥಿಗಳಿದ್ದಾರೆ. ಕ್ಯಾಂಪಸ್‍ಗೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೆÇೀಷಕರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಬರಮಾಡಿಕೊಂಡರು. ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾಲೇಜು ಎನ್‍ಎಸ್‍ಎಸ್ ನೇತೃತ್ವದಲ್ಲಿ ಹೆಲ್ಪ್ ಡಸ್ಕ್ ವ್ಯವಸ್ಥೆ ಸಜ್ಜುಗೊಳಿಸಲಾಗಿತ್ತು. ಮುಖ್ಯದ್ವಾರದಿಂದ ವಿವಿಧ ಡಿಪಾರ್ಟ್‍ಮೆಂಟ್‍ಗಳಿಗೆ ಬಸ್ ಸೇವೆಯನ್ನೂ ಒದಗಿಸಲಾಗಿತ್ತು. ದ್ವಿತೀಯ ವರ್ಷದ ವಿದ್ಯಾರ್ಥಿಗಳೂ ನವಾಗತರನ್ನು ಸ್ವಾಗತಿಸುವಲ್ಲಿ ಸಕ್ರಿಯರಾಗಿದ್ದರು. ಮುಂದಿನ ದಿನಗಳಲ್ಲಿ ಅಧ್ಯಯನ ದೀಕ್ಷಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.