HEALTH TIPS

ಕೊಲ್ಲಂನಲ್ಲಿದೆ ಒಂದು ದುರ್ಯೋಧನನ ದೇವಸ್ಥಾನ: ದಕ್ಷಿಣ ಭಾರತದ ಏಕೈಕ ದುರ್ಯೋಧನ ದೇವಾಲಯ

              ಭಾರತದ ಪರಂಪರೆಯಲ್ಲಿ ಪ್ರತಿಯೊಂದು ವಸ್ತುವೂ ಆರಾಧನೀಯ. ಇಲ್ಲಿ ವೃಕ್ಷ, ಕಲ್ಲು, ಬಿಂಬ, ಕಂಬಗಳಲ್ಲಿ ದೇವತಾ ಶಕ್ತಿಯನ್ನು ಆಚರಿಸಿಕೊಂಡುಬರಲಾಗುತ್ತಿದೆ. ಪ್ರತಿಯೊಬ್ಬ ಸನಾತನಿಗೂ ಅವನವನಿಗೆ ಬೇಕಾದಂತೆ, ಬೇಕಾದ ವ್ಯಕ್ತಿ-ಶಕ್ತಿಯನ್ನು ಆರಾಧಿಸುವ ಸ್ವಾತಂತ್ರ್ಯ ವಿಶೇಷವಾಗಿದೆ.ಅಂತಹದೊಂದು ವಿಶೇಷ ದೇವಾಲಯ ಕೊಲ್ಲಂ ಜಿಲ್ಲೆಯಲ್ಲಿದೆ.           

               ಅಜ್ಞಾತವಾಸಕ್ಕೆ ತೆರಳಿದ್ದ ಪಾಂಡವರನ್ನು ಬೇಟೆಯಾಡಲು ಭತ್ತದ ಗದ್ದೆಗಳು ಮತ್ತು ಪರ್ವತಗಳಿದ್ದ ಸ್ಥಳಕ್ಕೆ ದಂಡೆತ್ತಿ ಬಂದವನು ದುರ್ಯೋಧನ. ನೈಸರ್ಗಿಕ ಸೌಂದರ್ಯದಿಂದ ತುಂಬಿರುವ ಪರ್ವತಗಳು ಕೊಲ್ಲಂನಲ್ಲಿವೆ. ದಣಿದು ಬಾಯಾರಿದ ದುರ್ಯೋಧನ ಕೊಲ್ಲಂನ ಕಟ್ಟಂಸೇರಿ ಮನೆಯಲ್ಲಿ ನೀರು ಕೇಳಿದನು. ಆ ಮನೆಯ ಹೆಂಗಸು ದುರ್ಯೋಧನನಿಗೆ ಕುಡಿಯಲು ಒಂದು ಮಡಕೆ ನೀರು ಕೊಟ್ಟಳು.

             ದುರ್ಯೋಧನ ಪರ್ವತದ ಮೇಲೆ ಕುಳಿತು ಆ ಮನೆ ಮತ್ತು ಈ ಪುಟ್ಟ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದನು. 101 ಎಕರೆಯನ್ನು ಉಡುಗೊರೆಯಾಗಿಯೂ ಆ ಮನೆಗೆ ನೀಡಿದನು.  ಹಸ್ತಿನ ಪುರಿಗೆ ಹಿಂದಿರುಗಿದಾಗ ಮಹಾಭಾರತ ಯುದ್ಧದಲ್ಲಿ ಗೆದ್ದು ಹಿಂತಿರುಗಿ ಬರದಿದ್ದರೆ ಸತ್ತವನೆಂದು ಪರಿಗಣಿಸಿ ಉದಕಕ್ರಿಯೆಗಳನ್ನು ಮಾಡುವಂತೆ ಸೂಚಿಸಿದ್ದ ಎಂಬುದು ಐತಿಹ್ಯ.

             ವನವಾಸ ಮಾಡಿದ ಪಾಂಡವರು ಅಜ್ಞಾತವಾಸಕ್ಕಾಗಿ ದಕ್ಷಿಣ ಭಾರತದಲ್ಲಿದ್ದಾರೆ ಎಂದು ದುರ್ಯೋಧನ ಭಾವಿಸಿದ. ಪಾಂಡವರನ್ನು ಹುಡುಕುತ್ತಾ ಕೊಲ್ಲಂ ತಲುಪಿದ. ನಿಖರವಾಗಿ ಹೇಳಬೇಕೆಂದರೆ, ಕೊಲ್ಲಂ ಜಿಲ್ಲೆಯ ಕುನ್ನತ್ತೂರ್ ತಾಲೂಕಿನ ಪೆÇರುವಾಹಿಯಾ ಬಳಿ ಪೆರುವಿರುತಿ ಬೆಟ್ಟಗಳಿವೆ. ನೀರಿಗಾಗಿ ಆತ ಬಂದ ಮನೆಯೂ ಇಲ್ಲೇ ಇದೆ. ದಕ್ಷಿಣ ಭಾರತದ ಏಕೈಕ ದುರ್ಯೋಧನ ದೇವಾಲಯ ಶತಮಾನಗಳಿಂದ ಇಲ್ಲಿದೆ.ಆವರಣವಿಲ್ಲದೆ ಬಲಿಪೀಠದ ಮೇಲೆ ಪೀಠದ ಮೇಲೆ ಕುಳಿತಿರುವ ದುರ್ಯೋಧನಮೂರ್ತಿ ಇಲ್ಲಿಯ ಆರಾಧ್ಯಮೂರ್ತಿ.

              ಪೂಜಾರಿಯನ್ನು ಉರಾಳಿ ಎಂದು ಕರೆಯಲಾಗುತ್ತದೆ. ಮುಖ್ಯ ನೈವೇದ್ಯವೆಂದರೆ ತೊಗರಿ. ಹುರುಳಿ, ವೀಳ್ಯದೆಲೆ, ತಂಬಾಕು ಪಾಕದಿಂದ ಪೂಜೆ ನಡೆಯುತ್ತದೆ. ಮದ್ಯ ಮತ್ತು ಕೋಳಿಯನ್ನು ಸಹ ನೈವೇದ್ಯವಾಗಿ ನೀಡಲಾಗುತ್ತದೆ. ಪೆರುವಿರುತ್ತಿ ಬೆಟ್ಟದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪಲ್ಲಿಪಾನವೂ ಪ್ರಸಿದ್ಧವಾಗಿದೆ. ಇಲ್ಲಿ ಹನ್ನೆರಡು ದಿನಗಳ ಕಾಲ ನಡೆಯುವ ಪಲ್ಲಿಪಾನದಲ್ಲಿ ನಡೆಯುವ ವಿವಿಧ ಪೂಜೆಗಳು ಮತ್ತು ನಂತರ ನಡೆಯುವ ಮಲಕುಡ ಮಹೋತ್ಸವಕ್ಕೆ ಎಲ್ಲ ಜಾತಿ, ಧರ್ಮದ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries