ಪತ್ತನಂತಿಟ್ಟ: ಜಸ್ಟಿನ್ ಹೋಮ್‍ನಲ್ಲಿ ಅನುಮತಿಯಿಲ್ಲದೆ ಮಣಿಪುರಿ ಮಕ್ಕಳಿಗೆ ವಸತಿ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ 9 ಬಾಲಕಿಯರನ್ನು ನಿಕೋಲ್ಸನ್ ಶಾಲೆಗೆ ಹಾಗೂ 19 ಬಾಲಕರನ್ನು ಕೊಲ್ಲಂ ಸರ್ಕಾರಿ ಹೋಮ್‍ಗೆ ವರ್ಗಾಯಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಮಾಹಿತಿ ನೀಡಿರುವÀರು. ಆಯೋಗದ ಸದಸ್ಯರಾದ ಎನ್. ಸುನಂದಾ ಮತ್ತು ಕೆ.ಕೆ.ಶಾಜು ನಿಕೋಲ್ಸನ್ ಸಿರಿಯನ್ ಸೆಂಟ್ರಲ್ ಶಾಲೆಗೆ ಭೇಟಿ ನೀಡಿದಾಗ ಜಸ್ಟಿನ್ ಹೋಮ್‍ನಲ್ಲಿ ಅನುಮತಿಯಿಲ್ಲದೆ ಮಣಿಪುರಿ ಮಕ್ಕಳಿಗೆ ವಸತಿ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಸಂಸ್ಥೆಯಲ್ಲಿ ಮಕ್ಕಳು ಸುರಕ್ಷಿತವಾಗಿಲ್ಲ ಎಂಬುದನ್ನು ಆಯೋಗ ಪತ್ತೆಹಚ್ಚಿ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೋಲೀಸರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಣಿಪುರಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮಣಿಪುರ ಮಕ್ಕಳ ಹಕ್ಕುಗಳ ಆಯೋಗದ ಮನವಿ ಮೇರೆಗೆ ಆಯೋಗ ಮಧ್ಯಸ್ಥಿಕೆ ವಹಿಸಿತು.