ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೀಟ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂವಾದ ನಡೆಸಿರುವ ವಿಡಿಯೊ ಮತ್ತು ಫೋಟೊ ಹಂಚಿಕೊಂಡಿರುವ ಮೋದಿ, 'ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ಹೋಗುತ್ತಿರುವ ನಮ್ಮ ತಂಡದೊಂದಿಗೆ ಸಂವಹನ ನಡೆಸಿದೆ.
'ಪ್ಯಾರಿಸ್‌ಗೆ ತೆರಳುತ್ತಿರುವ ನೀವು (ಅಥ್ಲೀಟ್‌ಗಳು) ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮನಸ್ಥಿತಿಯಲ್ಲಿದ್ದೀರಿ ಮತ್ತು ನಾನು ಒಲಿಂಪಿಕ್ಸ್‌ನಲ್ಲಿ ಗೆದ್ದ ಬಳಿಕ ದೇಶಕ್ಕೆ ಹಿಂತಿರುಗುವ ನಿಮ್ಮನ್ನು ಸ್ವಾಗತಿಸುವ ಮನಸ್ಥಿತಿಯಲ್ಲಿದ್ದೇನೆ. ಕ್ರೀಡಾ ಜಗತ್ತಿಗೆ ಸಂಬಂಧಿಸಿದ ನಮ್ಮ ದೇಶದ ತಾರೆಗಳನ್ನು ಭೇಟಿಯಾಗಲು ನಾನು ಪ್ರಯತ್ನಿಸುತ್ತೇನೆ. ಹೊಸ ವಿಷಯಗಳನ್ನು ಕಲಿತು, ಕ್ರೀಡಾಪಟುಗಳ ಪ್ರಯತ್ನ ಹಾಗೂ ಶ್ರಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಅಗತ್ಯವಿದ್ದಲ್ಲಿ ಕೆಲವು ಪ್ರಯತ್ನ ಆಗಬೇಕಿದೆ. ಈ ದಿಕ್ಕಿನಲ್ಲಿ ಸರ್ಕಾರ ತನ್ನ ಕೆಲಸ ಮುಂದುವರಿಸಲಿದೆ. ನಾನು ಎಲ್ಲರೊಂದಿಗೆ ನೇರ ಮಾತುಕತೆ ನಡೆಸಲು ಪ್ರಯತ್ತಿಸುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ 26ರಿಂದ ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಒಲಿಂಪಿಕ್ ಕೂಟದಲ್ಲಿ ಭಾರತ ಅಥ್ಲೆಟಿಕ್ಸ್ ತಂಡವನ್ನು ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಅವರು ಮುನ್ನಡೆಸಲಿದ್ದಾರೆ. ಈ ಬಾರಿಯ ಕೂಟದಲ್ಲಿ 28 ಆಟಗಾರರ ಭಾರತ ಅಥ್ಲೆಟಿಕ್ಸ್ ತಂಡವು ಸ್ಪರ್ಧಿಸಲಿದೆ. 26 ವರ್ಷದ ನೀರಜ್ ಅವರು ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ಈ ಬಳಗದಲ್ಲಿ 17 ಪುರುಷರು ಮತ್ತು 11 ಮಹಿಳಾ ಅಥ್ಲೀಟ್‌ಗಳು ಇದ್ದಾರೆ.