ಆಲಪ್ಪುಳ: ಸರ್ಕಾರದ ಅಭಿವೃದ್ಧಿ ಸಾಧನೆಗಳ ಕುರಿತು ಮಾತನಾಡುತ್ತಿದ್ದಾಗ ಸಭಿಕರ ಮಧ್ಯದಿಂದ ಶೋತೃವೊಬ್ಬ ಅರಚಿದ ಘಟನೆ ನೆಡದಿದೆ.
ಪುನ್ನಪ್ರದಲ್ಲಿ ಮತ್ಸ್ಯಫೆಡ್ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಸಚಿವ ಸಾಜಿ ಚೆರಿಯನ್ ಅವರ ಭಾಷಣದ ವೇಳೆ ಈ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿ ಸಭಿಕರ ಮಧ್ಯೆ ಕುಳಿತಿದ್ದ ವ್ಯಕ್ತಿಯೊಬ್ಬರು ಕೂಗಾಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಕರೆದುಕೊಂಡು ಹೋಗುವಂತೆ ಸಚಿವರು ಆದೇಶಿಸಿದಾಗ ಪೆÇಲೀಸರು ಮಧ್ಯ ಪ್ರವೇಶಿಸಿ ಆತನನ್ನು ತೆರಳುವಂತೆ ಸೂಚಿಸದರೂ ಹೊರತೆರಳದೆ ಅಲ್ಲೇ ಕುಳಿತಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.
ಅಷ್ಟರಲ್ಲಿ ಆಯೋಜಕರೊಬ್ಬರÁ್ಟ ವ್ಯಕ್ತಿಯನ್ನು ಹಿಡಿದು ಕಾರ್ಯಕ್ರಮದ ಸಭಾಂಗಣದಿಂದ ಹೊರಗೆ ಕರೆದೊಯ್ದರು. ಸಚಿವ ಸಾಜಿ ಚೆರಿಯನ್ ಬಳಿಕ ಭಾಷÀಣ ಮುಂದುವರಿಸಿದರು.