ಗುರುವಾಯೂರು: ಗುರುವಾಯೂರು ದೇವಸ್ವಂ ಆನೆಗಳ ಉಪಶಮನ ಚಿಕಿತ್ಸೆ ಸೋಮವಾರ ಆರಂಭಗೊಂಡಿದೆ. ಪಶುವೈದ್ಯಕೀಯ ಮತ್ತು ಪಶು ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎಸ್.ಅನಿಲ್ ಅವರು ಪುನ್ನತ್ತೂರು ಆನೆಧಾಮದಲ್ಲಿ ಚಿಕಿತ್ಸೆಯನ್ನು ಉದ್ಘಾಟಿಸಿದರು.
ಸುಖ ಚಿಕಿತ್ಸೆ ಇದೇ 30ರವರೆಗೆ ನಡೆಯಲಿದೆ. ಆರೋಗ್ಯ ಮತ್ತು ಪೋಷಣೆಗಾಗಿ ಆನೆಗಳಿಗೆ ಗುಣಮಟ್ಟದ ಆಹಾರ, ಚಿಕಿತ್ಸೆ, ಆಟ ಪಾಠಗಳಿರುತ್ತವೆ.
ದೇವಸ್ವಂನ 38 ಆನೆಗಳ ಪೈಕಿ 26 ಆನೆಗಳು ಉಪಶಮನ ಚಿಕಿತ್ಸೆ ಪಡೆಯುತ್ತಿವೆ. ಹನ್ನೆರಡು ಆನೆಗಳಿಗೆ ಮದವೆದ್ದಿದ್ದು ಸ್ವಭಾವ ಸಹಜ ಸ್ಥಿತಿಗೆ ಬಂದಾಗ ಈ ಆನೆಗಳಿಗೆ ಆರಾಮವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆನೆಗಳ ಯೋಗಕ್ಷೇಮ ಚಿಕಿತ್ಸೆಗೆ 11 ಲಕ್ಷ ರೂ.ಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ.
ಆನೆಗೊಂದರಂತೆ ಅಕ್ಕಿ 3420 ಕೆಜಿ, ಕಡಲೆ 1140 ಕೆಜಿ, ರಾಗಿ 1140 ಕೆಜಿ, ಅರಿಶಿನ ಪುಡಿ 114 ಕೆಜಿ, ಉಪ್ಪು 114 ಕೆಜಿ, ಅಷ್ಟಚೂಣರ್ಂ 123 ಕೆಜಿ, ಚವನಪ್ರಾಶನ 285 ಕೆಜಿ, ಶರ್ಕರ ಫರೋಲ್, ಕಬ್ಬಿಣದ ಟಾನಿಕ್, ಖನಿಜ ಔಷಧಿಗಳು ಮತ್ತು ಜಂತುಹುಳು ನಿವಾರಣೆ ಔಷಧಿ ನೀಡಲಾಗುತ್ತದೆ.