ನಿಮ್ಮ ಮುಖದ ಮೇಲೆ ಇಲ್ಲವೆ ಮೈ ಮೇಲೆ ಒಂದಿಷ್ಟು ಕಲೆಗಳಿರುವುದು ಸಾಮಾನ್ಯ, ಅದ್ರಲ್ಲೂ ಮುಖದ ಮೇಲೆ ಕಲೆಗಳಿದ್ದರೆ ಮುಜುಗರ, ಆತ್ಮವಿಶ್ವಾಸಕ್ಕೆ ಅದು ಹೊಡೆತ ಕೊಡುತ್ತದೆ. ಮುಖದಲ್ಲಿ ಮೊಡವೆಯಿಂದ ಕಲೆಯಾಗುವುದು, ಸುಟ್ಟ ಕಲೆ, ಗಾಯದ ಕಲೆಗಳಾಗುವುದು ಸಾಮಾನ್ಯ.
ಆದ್ರೆ ಈ ಕಲೆಗಳ ಹೋಗಲಾಡಿಸಲು ನೀವು ಹಲವು ರೀತಿಯ ಪ್ರಯತ್ನವಂತೂ ಮಾಡಿರುತ್ತೀರಿ, ಏಕೆಂದರೆ ಮುಖದ ಮೇಲೆ ಕಲೆ ಇದ್ದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದ್ರೆ ನೀವು ಎಷ್ಟೇ ಪ್ರಯತ್ನ ಮಾಡಿದರು ಕೆಲವೊಮ್ಮೆ ಈ ಕಲೆಗಳು ಕಡಿಮೆಯಾಗುವುದೇ ಇಲ್ಲ. ಮಾರುಕಟ್ಟೆಯಲ್ಲಿ ಹತ್ತಾರು ರೀತಿಯ ಕ್ರೀಮ್‌ಗಳು ಬಂದಿದ್ದರೂ ಕೂಡ ಅದರಿಂದ ಕಲೆಗಳು ಮಾಯವಾಗುತ್ತದೆ ಎಂದು ನಂಬಲಾಗುವುದಿಲ್ಲ.
ಹಾಗಾದ್ರೆ ಈ ಗಾಯದ ಕಲೆಗಳ ಹೋಗಲಾಡಿಸಲು ಮನೆ ಮದ್ದು ಏನು? ಮನೆಯಲ್ಲಿ ಇದಕ್ಕೆ ಯಾವ ಚಿಕಿತ್ಸೆ ಮಾಡಬೇಕು? ಎಂಬುದನ್ನು ನಾವಿಂದು ತಿಳಿಯೋಣ. ನಮ್ಮ ಮನೆಯಲ್ಲಿರುವ ವಸ್ತುಗಳಿಂದಲೇ ಇದಕ್ಕೆ ಪರಿಹಾರ ಮಾಡಬಹುದು. ಹಾಗಾದ್ರ ಏನು ಮಾಡಬೇಕು ಎಂಬುದನ್ನು ನೋಡಿ.
ಸುಟ್ಟ ಕೊಬ್ಬರಿ
ಒಂದು ಕೊಬ್ಬರಿಯನ್ನು ತೆಗೆದುಕೊಂಡು ಅದನ್ನ ಸುಡಬೇಕು. ಸ್ಟೌ ಮೇಲೆ ಇಟ್ಟು ಚೆನ್ನಾಗಿ ಕಪ್ಪಾಗುವವರೆಗೂ ಸುಡಬೇಕು. ಬಳಿ ಈ ಕೊಬ್ಬರಿಯ ಮೇಲಿರುವ ಕರಿಯನ್ನು ಹಚ್ಚಿಕೊಳ್ಳಬೇಕು, ಈ ರೀತಿ ನಿತ್ಯವೂ ಹಚ್ಚಿದರೆ ವಾರದ ಒಳಗೆ ಗಾಯದ ಕಲೆಗಳು ಮಾಯವಾಗುತ್ತದೆ.
ಅಲೂವೇರಾ-ಅರಶಿನ
ಸ್ವಲ್ಪ ಅಲೂವೇರಾದ ಲೋಳೆ ತೆಗೆದುಕೊಂಡು ಅದಕ್ಕೆ ಅರಶಿನ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅದನ್ನು ರಾತ್ರಿ ಮಲಗುವ ವೇಳೆ ಗಾಯದ ಕಲೆಯ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಒಂದು ವಾರ ಹಚ್ಚುವುದರಿಂದ ಕಲೆಗಳು ಮಾತವಾಗುತ್ತವೆ.
ಅಲೂವೇರಾ-ಆಲೂಗಡ್ಡೆ
ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ಕತ್ತರಿಸಿಕೊಂಡು ಅದರಿಂದ ರಸ ತೆಗೆಯಬೇಕು. ಇಂದು ಚರಡಿಯಲ್ಲಿ ಅದರ ರಸವನ್ನು ಹಿಂಡಿ ತೆಗದಿಟ್ಟುಕೊಳ್ಳಿ. ಬಳಿಕ ಅದನ್ನು ಒಂದು ಸಣ್ಣ ಬೌಲ್‌ಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಅಲೂವೇರಾ ರಸವನ್ನು ಹಾಕಿ ಬಳಿಕ ಇದಕ್ಕೆ ಬಳಿಕ ಇದಕ್ಕೆ ಅರಶಿನ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಒಂದು ಚಿಟಿಕೆ ಅರಶಿನ ಹಾಕಿಕೊಂಡರೆ ಸಾಕು. ಇದನ್ನು ಗಾಯದ ಗುರುತಿನ ಮೇಲೆ ಮಸಾಜ್ ಮಾಡಬೇಕು. 5 ನಿಮಿಷ ಮಸಾಜ್ ಮಾಡಿ ಒಣಗಲು ಬಿಡಿ. ಬಳಿಕ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಈ ರೀತಿ ಒಂದು ವಾರ ಮಾಡಿ ನೋಡಿ.
ಮಾವಿನ ಎಲೆ
ಮಾವಿನ ಎಲೆಯನ್ನು ಒಣಗಿಸಿ ಅದನ್ನು ಬೆಂಕಿಯಲ್ಲಿ ಸುಟ್ಟು ಬೂದಿ ಮಾಡಿಕೊಳ್ಳಬೇಕು. ಬಳಿಕ ಅದಕ್ಕೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಗಾಯದ ಕಲೆಯ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮದಲ್ಲಿ ಸತ್ತ ಕೋಶಗಳ ನಿವಾರಣೆ ಮಾಡಲಿದ್ದು ಹೊಸ ಕೋಶಗಳು ಬೆಳವಣಿಗೆ ಹೊಂದಲಿದೆ.
ಸಾಸಿವೆ ಎಣ್ಣೆ-ಅರಶಿನ
ಮೆಡಿಕಲ್ ಅಥವಾ ಅಂಗಡಿಯಲ್ಲಿ ಸಾಸಿವೆ ಎಣ್ಣೆ ಸಿಗುತ್ತದೆ ಇದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಚಿಟಿಕೆ ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಗಾಯದ ಗುರುತುಗಳ ಮೇಲೆ ಎನ್ನಾಗಿ ಮಸಾಜ್ ಮಾಡಬೇಕು. ಇದಾಗೊ ಸ್ವಲ್ಪ ಕಾಲ ಒಣಗಲು ಬಿಟ್ಟು ನಂತರ ತೊಳೆಯಬೇಕು. ಹೀಗೆ ಒಂದು ವಾರ ಮಾಡಿದರೆ ನಿಮ್ಮ ಕಲೆಗಳು ನಿವಾರಣೆಯಾಗಲಿದೆ.
ಈರುಳ್ಳಿ-ನಿಂಬೆ ರಸ
ಒಂದು ಈರುಳ್ಳಿ ಕತ್ತರಿಸಿ ಪೇಸ್ಟ್ ಮಾಡಿಕೊಳ್ಳಿ, ಇದಕ್ಕೆ ಒಂದು ನಿಂಬೆ ರಸ ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಅರ್ಧ ಗಂಟೆಗಳ ಕಾಲ ಬಿಟ್ಟು ನಂತರ ಗಾಯದ ಕಲೆಗಳ ಮೇಲೆ ಚೆನ್ನಾಗಿ ಹಚ್ಚಿ ಗಂಟೆಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿ ನೋಡಿ.