ತಿರುವನಂತಪುರಂ: ರಾಜ್ಯದಲ್ಲಿ ಛಾಪಾಪತ್ರಗಳ ತೀವ್ರ ಕ್ಷಾಮ ತಲೆದೋರಿದೆ. 100, 200 ಮತ್ತು 500 ರೂಪಾಯಿಗಳ ಮುದ್ರಾಪತ್ರಗಳು ಲಭ್ಯವಿಲ್ಲ. ಸಾಕಷ್ಟು ರೂ 1000 ಸ್ಟ್ಯಾಂಪ್‍ಗಳೂ ಲಭ್ಯವಿಲ್ಲ.
ಕಳೆದ ಒಂದು ವರ್ಷದಿಂದ ರೂ 200 ರೂ. ಮುಖಬೆಲೆಯ ಸ್ಟ್ಯಾಂಪ್‍ಗಳು ಲಭ್ಯವಿಲ್ಲ. ಮನೆ ಬಾಡಿಗೆ, ಆಸ್ತಿ ಮಾರಾಟ ಇತ್ಯಾದಿ ಎಲ್ಲದಕ್ಕೂ ನೋಟರಿ ದೃಢೀಕರಣಕ್ಕೆ 200 ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ ಬಳಸಲಾಗುತ್ತದೆ. ಇದು ಲಭಿಸದಿರುವುದರಿಂದ 500 ರೂ.ವಿನ ಸ್ಟಾಂಪ್ ಪೇಪರ್ ಅನಿವಾರ್ಯವಾಗಿ ಬಳಸಬೇಕಾಗುತ್ತಿದೆ. ಈಗ 500 ರೂ. ಅಲ್ಲದೆ 1000 ರೂ. ಗಳ ಛಾಪಾಪತ್ರವೂ ಲಭಿಸದ ಪರಿಸ್ಥಿತಿ ಇದೆ.
ಇ-ಸ್ಟಾಂಪಿಂಗ್ ಅನುಷ್ಠಾನದ ಭಾಗವಾಗಿ ಸ್ಟಾಂಪ್ ಮುದ್ರಣವನ್ನು ನಿಲ್ಲಿಸಲಾಗಿದೆ. ಇದು ಬಿಕ್ಕಟ್ಟಿಗೆ ಕಾರಣವಾಗಿದೆ. ಮಾರಾಟಗಾರರಿಗೆ ತರಬೇತಿ ನೀಡಲಾಗಿದ್ದರೂ, ಸ್ಟಾಂಪಿಂಗ್ ಸಾಫ್ಟ್‍ವೇರ್ ಸಂಪೂರ್ಣವಾಗಿ ಸುಸಜ್ಜಿತವಾಗದಿರುವುದು ಸಂದಿಗ್ಧತೆಯನ್ನು ಸೃಷ್ಟಿಸಿದೆ. ಬದಲಿ ವ್ಯವಸ್ಥೆ ಸಿದ್ಧಪಡಿಸಲು ಸರ್ಕಾರ ಮುಂದಾಗದಿರುವುದು ಸವಾಲಿಗೆ ಕಾರಣವಾಗಿದೆ.