HEALTH TIPS

ಪಾರಿಜಾತದಲ್ಲಿ ಎಷ್ಟೊಂದು ಆರೋಗ್ಯ ಗುಣಗಳಿವೆ ಗೊತ್ತಾ..?

 ನೆಯಂಗಳದಲ್ಲಿ ಪುಟ್ಟದಾಗಿ ಹೂವು ಬಿಡುವ ಪಾರಿಜಾತ ಅನೇಕ ಆರೋಗ್ಯ ಗುಣಗಳನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಒಂದು ಹೂ ಇದ್ದರೆ ಮನೆಯ ತುಂಬ ಪರಿಮಳ ಹರಡಿರುತ್ತದೆ. ಅದೇ ರೀತಿ ದೇವರಿಗೂ ಅಷ್ಟೇ ಶ್ರೇಷ್ಠವಾದ ಹೂವು ಪಾರಿಜಾತ. ಈ ಪಾರಿಜಾತ ಆರೋಗ್ಯಕ್ಕೂ ಅಷ್ಟೇ ಉತ್ತಮವೆಂದರೆ ನೀವು ನಂಬಲೇಬೆಕು.

ಹೌದು, ಪಾರಿಜಾತದ ಹೂವು, ಎಲೆ, ಬೇರು ಎಲ್ಲವೂ ಉತ್ಕೃಷ್ಟ ಆರೋಗ್ಯ ಗುಣಗಳನ್ನು ಹೊಂದಿದೆ. ಅನೇಕ ಅನಾರೋಗ್ಯಕ್ಕೆ ಪಾರಿಜಾತವನ್ನು ಮನೆಮದ್ದಾಗಿ ಬಳಸುತ್ತಾರೆ. ಬಿಳಿ ಬಣ್ಣದ ಪಕಳೆ ಅದರ ಮಧ್ಯೆ ಕೇಸರಿ ಬಣ್ಣದ ಗುರುತು ಹೊಂದಿರುವ ಪುಟ್ಟ ಹೂವು ಪಾರಿಜಾತ. ಇದರ ಒಂದು ಹೂವು ಸಾಕು ಇಡೀ ಮನೆಯನ್ನು ಪರಿಮಳಯುಕ್ತವಾಗಿಸುತ್ತದೆ.
ಹಾಗಾದರೆ ಪಾರಿಜಾತದಿಂದ ಯಾವೆಲ್ಲಾ ಆರೋಗ್ಯ ಗುಣಗಳಿವೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ. ವಿವಿಧ ರೀತಿಯ ಜ್ವರಕ್ಕೆ ಉತ್ತಮ ಮನೆಮದ್ದು ಪಾರಿಜಾತ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಜ್ವರ ಸೇರಿದಂತೆ ವಿವಿಧ ತರಹದ ಜ್ವರಗಳನ್ನು ಗುಣಪಡಿಸುತ್ತದೆ. ಪಾರಿಜಾತ ಎಲೆ ಮತ್ತು ತೊಗಟೆಯ ಸಾರವು ಜ್ವರವನ್ನು ತಕ್ಷಣವೇ ಶಮನಗೊಳಿಸಲು ತುಂಬಾ ಉಪಯುಕ್ತವಾಗಿದೆ ಅಲ್ಲದೆ ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಜ್ವರ ಬಂದಾಗ ಕಡಿಮೆಯಾಗುವ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಜ್ವರವನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ.
ಹೀಗೆ ಬಳಕೆ ಮಾಡಿ ಒಂದು ಚಮಚ ಪಾರಿಜಾತ ಎಲೆಯ ರಸವನ್ನು ತೆಗೆದುಕೊಂಡು ಅದಕ್ಕೆ 2 ಕಪ್ ನೀರು ಹಾಕಿ ಕುದಿಸಿ, ಅದು ಒಂದು ಕಪ್‌ಗೆ ಕಡಿಮೆಯಾಗುತ್ತದೆ. ನಂತರ ಅದನ್ನು ಆಗಾಗ ಸೇವಿಸುತ್ತಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪಾರಿಜಾತದ ಬಳಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ದೇಹದಲ್ಲಿನ ಸುಸ್ತು, ಬಳಲಿಕೆಯನ್ನೂ ಕೂಡ ಇದು ನಿವಾರಿಸುತ್ತದೆ.
ಹೀಗೆ ಬಳಕೆ ಮಾಡಿ ಪಾರಿಜಾತದ 20-25 ಎಲೆ, ಹೂವುಗಳನ್ನು ತೆಗೆದುಕೊಂಡು ಅದನ್ನು 1 ಲೋಟ ನೀರು ಸೇರಿಸಿ ರುಬ್ಬಿಕೊಳ್ಳಿ. ಅದನ್ನು ಕುದಿಸಿ ಅರ್ಧಕ್ಕೆ ತಗ್ಗಿಸಿ, ನಂತರ ಅದನ್ನು ಸೋಸಿಕೊಂಡು ಮೂರು ಸಮಾನ ಭಾಗಗಳಾಗಿ ವಿಭಜಿಸಿ. ಪ್ರತಿ ಭಾಗವನ್ನು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಊಟಕ್ಕೆ 1 ಗಂಟೆ ಮೊದಲು ಸೇವಿಸಿ ಮತ್ತು 2 ತಿಂಗಳವರೆಗೆ ಇದನ್ನು ಸೇವಿಸಿ.​ಒಣಕೆಮ್ಮಿಗೆ ಪರಿಹಾರ ನೀಡುತ್ತದೆ ಪಾರಿಜಾತ ಎಲೆಗಳು ಮತ್ತು ಹೂವುಗಳಿಂದ ಮಾಡಿದ ಚಹಾವನ್ನು ಕೆಮ್ಮು, ಶೀತ ಮತ್ತು ಬ್ರಾಂಕೈಟಿಸ್ ಅನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಪಾರಿಜಾತ ಸಸ್ಯದ ಎಥೆನಾಲ್ ಸಾರವು ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ.
ಇದು ಅಸ್ತಮಾ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಹೀಗೆ ಬಳಕೆ ಮಾಡಿ 8 ರಿಂದ 10 ಪಾರಿಜಾತ ಹೂವು, ಎಲೆಗಳನ್ನು ಶುಂಠಿಯೊಂದಿಗೆ ಸೇರಿಸಿ ಮತ್ತು 2 ಕಪ್ ನೀರಿನಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಸೋಸಿಕೊಂಡು ಜೇನುತುಪ್ಪ ಸೇರಿಸಿಕೊಂಡು ಸೇವಿಸಿ. ಇದರಿಂದ ಗಂಟಲಿನ ತುರಿಕೆ, ಒಣ ಕೆಮ್ಮು ನಿವಾರಣೆಯಾಗುತ್ತದೆ.​ಮಧುಮೇಹ ನಿಯಂತ್ರಣ ಮಾಡುತ್ತದೆ ಇತ್ತೀಚಿನ ಅಧ್ಯಯನದ ಪ್ರಕಾರ ಪಾರಿಜಾತ ಮಧುಮೇಹ ನಿಯಂತ್ರಿಸುವ ಗುಣವನ್ನು ಹೊಂದಿದೆ.
ಹೀಗಾಗಿ ಮಧುಮೇಹಿಗಳಿಗೆ ಇದು ಉತ್ತಮ ಪದಾರ್ಥವಾಗಿದೆ. ಹೀಗೆ ಬಳಕೆ ಮಾಡಿ ಪಾರಿಜಾತ ಎಲೆ ಮತ್ತು ಹೂವುಗಳನ್ನು ತೆಗೆದುಕೊಂಡು 2 ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ಅರ್ಧವಾಗುವವರೆಗೆ ಕುದಿಸಿಕೊಳ್ಳಿ. ಅದನ್ನು ಸೋಸಿಕೊಂಡು ದಿನಕ್ಕೆ ಒಂದು ಬಾರಿ ಕುಡಿಯುತ್ತಾ ಇರಿ.
ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಸಂಧಿವಾತವನ್ನು ಕಡಿಮೆ ಮಾಡುತ್ತದೆ ಗಂಟುಗಳಲ್ಲಿ ಹಿಂಸೆ ಉಂಟು ಮಾಡುವ ಸಂಧಿವಾತವನ್ನು ಕಡಿಮೆ ಮಾಡಲು ಪಾರಿಜಾತ ಸಹಾಯಕವಾಗಿದೆ. ಪಾರಿಜಾತದ ಎಲೆ ಮತ್ತು ಹೂವುಗಳನ್ನು ಬಳಸಿ ಸಂಧಿವಾತವನ್ನು ಕಡಿಮೆ ಮಾಡಬಹುದಾಗಿದೆ. ಹೀಗೆ ಬಳಕೆ ಮಾಡಿ ಸಂಧಿವಾತ ನಿವಾರಿಸಲು ಪಾರಿಜಾತ ಎಲೆಗಳ ಕಷಾಯವು ಅತ್ಯುತ್ತಮವಾಗಿದೆ. ಅಲ್ಲದೆ, ತೆಂಗಿನ ಎಣ್ಣೆಯಲ್ಲಿ 5-6 ಹನಿ ಪಾರಿಜಾತ ತೈಲವನ್ನು ಸೇರಿಸಿ ನೋವಿರುವಲ್ಲಿ ಹಚ್ಚಿದರೆ ತ್ವರಿತವಾಗಿ ನೋವು ಕಡಿಮೆಯಾಗುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries