HEALTH TIPS

ಗುಜರಾತಿನಲ್ಲಿ ಚಂಡೀಪುರ ವೈರಸ್: ಮೊದಲ ಸಾವನ್ನು ಖಚಿತಪಡಿಸಿದ ವೈರಾಣು ಸಂಸ್ಥೆ

          ಹಮದಾಬಾದ್‌: ಗುಜರಾತ್‌ನಲ್ಲಿ ಚಂಡೀಪುರ ವೈರಸ್‌ನಿಂದ ಮೃತಪಟ್ಟ ಮೊದಲ ಪ್ರಕರಣವನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ದೃಢಪಡಿಸಿದೆ.

            ಶಂಕಿತ ವೈರಾಣುವಿನಿಂದ ಸಾವಿಗೀಡಾದ ಐವರ ಮಾದರಿಗಳನ್ನು ಗುಜರಾತ್‌ನಿಂದ ಕಳುಹಿಸಲಾಗಿತ್ತು. ಈ ಪೈಕಿ 5 ವರ್ಷದ ಮೃತ ಬಾಲಕಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

            '5 ವರ್ಷದ ಬಾಲಕಿಯು ಚಂಡೀಪುರ ವೈರಸ್‌ನಿಂದ ಮೃತಪಟ್ಟಿರುವುದು ಮಾದರಿ ಪರೀಕ್ಷೆಯಿಂದ ದೃಢವಾಗಿದೆ. ಇದು ಮೊದಲ ಪ್ರಕರಣ ಇದಾಗಿದೆ. ಇನ್ನಷ್ಟು ಮಾದರಿಗಳ ವರದಿಗಾಗಿ ಕಾಯುತ್ತಿದ್ದೇವೆ' ಎಂದು ಹಿಮ್ಮತ್‌ನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರೇಶ್‌ ಶಿಲದಾರಿಯಾ ತಿಳಿಸಿದ್ದಾರೆ.

               ರಾಜ್ಯ ಸರ್ಕಾರ ಹೊರಡಿಸಿರುವ ಆರೋಗ್ಯ ಬುಲೆಟಿನ್ ಪ್ರಕಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ತಲಾ ಇಬ್ಬರು ರೋಗಿಗಳು ಶಂಕಿತ ವೈರಸ್‌ನಿಂದ ಮೃತಪಟ್ಟಿದ್ದಾರೆ. ಗುಜರಾತ್‌ನ 14 ಜಿಲ್ಲೆಗಳಲ್ಲಿ ಈವರೆಗೆ ಶಂಕಿತ ಪ್ರಕರಣಗಳು ವರದಿಯಾಗಿವೆ.‌

           ಶಂಕಿತ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ. ನೆರೆಯ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಕೆಲವರೂ ಮೃತಪಟ್ಟಿದ್ದಾರೆ ಎಂದು ಗಾಂಧಿನಗರ ಜಿಲ್ಲೆಯ ಹಿರಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

               'ಒಂದು ಸಾವು ಸಂಭವಿಸಿರುವುದನ್ನು ಬಿಟ್ಟರೆ, ಉಳಿದೆಲ್ಲವೂ ಶಂಕಿತ ಪ್ರಕರಣಗಳು. ಮಕ್ಕಳ ಸಾವಿನ ಪ್ರಕರಣ ಮತ್ತು ಸೋಂಕು ಹರಡುತ್ತಿರುವ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿ, ಜಾಗೃತಿ ಮೂಡಿಸಲು ತಂಡಗಳನ್ನು ನಿಯೋಜಿಸಿದ್ದೇವೆ. ಆರೋಗ್ಯ ಸಚಿವರೊಂದಿಗೆ ಇಂದು (ಗುರುವಾರ) ಸಭೆ ನಡೆಸಲಿದ್ದೇವೆ' ಎಂದು ಅವರು ವಿವರಿಸಿದ್ದಾರೆ.

              ಸಬರ್‌ಕಾಂತ ಜಿಲ್ಲೆಯಲ್ಲಿ 8 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯಾಧಿಕಾರಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries