ಕುಂಬಳೆ: ಇನ್‍ಸ್ಟಿಟ್ಯೂಟ್ ಆಫ್ ಟಾರ್ಚರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಅಂತಿಮ ಪರೀಕ್ಷೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಯ ಕುಡಾಲುಮೇರ್ಕಳ ಗ್ರಾಮದ ಮುನ್ನೂರು ಮುಗೇರಿನ ಮನೀಶ್ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಇವರು ಮಂಗಳೂರಿನ ಸು„ೀಶ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಹಿರಿಯ ಕೃಷಿಕರೂ, ಸಾಮಾಜಿಕ, ಧಾರ್ಮಿಕ ಮುಂದಾಳುಗಳೂ ಆದ ಶ್ರೀಧರ ಶೆಟ್ಟಿ ಮತ್ತು ಪಾರಿಂಜಕೂಟೇಲು ತರವಾಡಿನ ಭಾರತಿ ಶ್ರೀಧರ ಶೆಟ್ಟಿ ದಂಪತಿಗಳ ಪುತ್ರ.