ಬದಿಯಡ್ಕ: ಕ್ಯಾಂಪ್ಕೊ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಕಾಞಂಗಾಡ್ ಶಾಖೆಯ ಸಕ್ರಿಯ ಸದಸ್ಯರಾದ ಯು ಟಿ ಜೋಸೆಫ್ ರಾಜಾಪುರಂ, ಇವರ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯಧನವನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ಜಯರಾಮ ಸರಳಾಯ ಮತ್ತು ರಾಧಾಕೃಷ್ಣ ಕೆ ಅವರು ಜೋಸೆಫ್ ರವರ ನಿವಾಸಕ್ಕೆ ಭೇಟಿ ನೀಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಎಂ, ಕಾಞಂಗಾಡ್ ಶಾಖೆಯ ಪ್ರಬಂಧಕ ಹರಿಪ್ರಸಾದ ಮತ್ತು ಸಿಬ್ಬಂದಿ ಪ್ರಕಾಶ್ ಉಪಸ್ಥಿತರಿದ್ದರು.