ಕಾಸರಗೋಡು: ರಾಜ್ಯದ ಎಡರಂಗ ಸರ್ಕಾರದ ತಪ್ಪಾದ ಆರ್ಥಿಕ ನೀತಿಯಿಂದಾಗಿ ರಾಜ್ಯವು ದಿನದಿಂದ ದಿನಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತಿದೆ. ಇದರಿಂದ ರಾಜ್ಯದ ಎಲ್ಲಾ ವಲಯಗಳ ಅಭಿವೃದ್ಧಿಗಳು ಕುಂಠಿತಗೊಳ್ಳಲು ಕಾರಣವಾಗುತ್ತಿದೆ. ರಾಜ್ಯವನ್ನು ಉತ್ತಮ ಆರ್ಥಿಕ ಸ್ಥಿತಿಗೆ ತಲುಪಿಸುವುದು ಹೇಗೆ ಎಂದು ನರೇಂದ್ರ ಮೋದಿಯವರನ್ನು ಕಂಡು ಕಲಿಯಬೇಕೆಂದು ಕೇಂದ್ರ ಫಿಶರೀಸ್, ಪಶುಸಂಗೋಪನೆ, ಅಲ್ಪ ಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ಜೋರ್ಜ್ ಕುರ್ಯನ್ ಹೇಳಿದ್ದಾರೆ.
ಕಾಸರಗೋಡು ನಗರ ಸಭಾ ಕಾನರೆನ್ಸ್ ಸ|ಭಾಂಗಣದಲ್ಲಿ ಶನಿವಾರ ಜರಗಿದ ಎನ್‍ಜಿಒ ಸಂಘದ ರಾಜ್ಯ ಕೌನ್ಸಿಲ್ ಸ`Éಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರಕ್ಕೆ ಆರ್ಥಿಕತೆ ಕುರಿತು ಸರಿಯಾದ ಚಿಂತನೆಯಿಲ್ಲದಿದ್ದರೆ ರಾಜ್ಯ ಮುಂದಕ್ಕೆ ಸಾಗಲು ಸಾಧ್ಯವಿಲ್ಲ. ಸಾಲವು ರಾಜ್ಯ ಸರ್ಕಾರದ ಮೂಲಧನವಾಗಿದೆ. ನಾವು ನೆಲೆಗೊಳ್ಳುವುದೇ ಸಾಲದಲ್ಲಿ ಎಂಬ ಚಿಂತನೆ ರಾಜ್ಯ ಸÀರ್ಕಾರದ್ದಾಗಿದೆ. ಮೋದಿಯವರಿಗೆ ಸ್ಪಷ್ಟ ನಿಲುವು ಇದೆ. ಆದ್ದರಿಂದ ಭಾರತವು ವಿಶ್ವದಲ್ಲಿ ಈ ಹಿಂದೆ ಇದ್ದ 11ನೇ ಆರ್ಥಿಕ ಸ್ಥಿತಿಯಿಂದ ಈಗ 5ನೇ ಸ್ಥಾನಕ್ಕೆ ತಲುಪಿದೆ. ಅದನ್ನು 3ನೇ ಸ್ಥಾನಕ್ಕೆ ತಲುಪಿಸಲು ಕೇಂದ್ರ ಸರ್ಕಾರ ಯತ್ನ ನಡೆಸುತ್ತಿದೆ ಎಂದರು.
ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಕೃಷಿಕರಿಗೆ ವರ್ಷಂಪ್ರತಿ 6000 ರೂ.ಗಳನ್ನು ನೀಡಲಾಗುತ್ತಿದೆ. ಕೋಟ್ಯಾಂತರ ಬಡ ಜನರಿಗೆ ಆಯುಷ್ಮಾನ್ ಭಾÁರತ್ ಯೋಜನೆ ಮೂಲಕ 5 ಲಕ್ಷ ರೂ.ಗಳ ವಿಮೆಯನ್ನು ಜಾರಿಗೊಳಿಸಲಾಗಿದೆ. ಮೋದಿಜಿಯವರು ಅಸಂಘಟಿತ ವಲಯದ ಏಳಿಗೆಗಾಗಿ ಹಲವಾರು ಜನೋಪಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಸಂಘಟಿತ ವಲಯದ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂಬುದು ಮೋದಿಜಿಯವರ ದೃಢ ನಿಲುವು ಆಗಿದೆ ಎಂದು ಜೋರ್ಜ್ ಕುರ್ಯನ್ ಹೇಳಿದರು.
ರಾಜ್ಯ ಉಪಾ|ಧ್ಯಕ್ಷೆ ಅನಿತಾ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಟಿ.ಎನ್.ರಮೇಶ್, ಆರ್‍ಆರ್‍ಕೆಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಸುನಿಲ್ ಕುಮಾರ್, ಬಿಎಂಎಸ್ ರಾಜ್ಯಾಧ್ಯಕ್ಷ ಶಿವಜಿ ಸುದರ್ಶನ್, ಬಿ.ಎಸ್.ರಾಜೀವ್, ಉಣ್ಣಿಕೃಷ್ಣನ್ ಉಣ್ಣಿತ್ತಾನ್, ಸಿ.ಬಾಬುರಾಜು, ಪಿ.ಪಿ.ಸುರೇಶ್‍ಬಾಬು, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಶಿಧರ ಪಿ.ಪೀತಾಂಬರನ್ ಮತ್ತಿತರರು ಉಪಸ್ಥಿತರಿದ್ದರು. ಪಿ.ಆರ್ಯ ಸ್ವಾಗತಿಸಿ, ಶ್ಯಾಮ್‍ಪ್ರಸಾದ್ ವಂದಿಸಿದರು.
ಠರಾವು ಮಂಡನೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಬಿಎಂಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಹೇಶ್ ಉದ್ಘಾಟಿಸಿದರು.