ಕುಂಬಳೆ: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಶಾಲೆಯ ಪ್ಲಸ್‌ವನ್ ತರಗತಿ ವಿದ್ಯಾರ್ಥಿಯನ್ನು ರ‍್ಯಾಗಿಂಗ್ ನಡೆಸಿದ ಐವರು ಪ್ಲಸ್‌ಟು ವಿದ್ಯಾರ್ಥಿಗಳ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಶಾಲಾ ಪ್ರಾಂಶುಪಾಲೆ ರಾಜಲಕ್ಷಿö್ಮÃ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಜುಲೈ ೧೧ರಂದು ಕಿರಿಯ ವಿದ್ಯಾರ್ಥಿ ಮೇಲೆ ಪ್ಲಸ್‌ಟು ತರಗತಿಯ ಐದು ಮಂದಿ ವಿದ್ಯಾರ್ಥಿಗಳ ತಂಡ ರ‍್ಯಾಗಿಂಗ್ ನಡೆಸಿತ್ತು. ಶಾಲಾ ಅಧಿಕಾರಿಗಳು ಈ ಐದು ಮಂದಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ತೀರ್ಮಾನ ಕೈಗೊಂಡಿದ್ದರು.