ನವದೆಹಲಿ:ದೇಶದ ರಕ್ಷಣಾ ವೆಚ್ಚಕ್ಕಾಗಿ 6.21 ಲಕ್ಷ ಕೋಟಿ ಮೀಸಲಿಟ್ಟಿದ್ದು, ಇದು ಹಿಂದಿನ ವರ್ಷದ 5.94 ಲಕ್ಷ ಕೋಟಿಗಿಂತಲೂ ಹೆಚ್ಚಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ದೇಶದ ವಾರ್ಷಿಕ ಒಟ್ಟು ಬಜೆಟ್ ಗಾತ್ರದ ಶೇ. 12.9ನ್ನು ರಕ್ಷಣಾ ಸಚಿವಾಲಯಕ್ಕೆ ಮೀಸಲಿಡುವ ಮೂಲಕ ದೇಶದ ಭದ್ರತೆಯಲ್ಲಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.