ಸಮರಸ ಚಿತ್ರಸುದ್ದಿ: ಉಪ್ಪಳ: ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನ ಬಜೆ ಹೇರೂರು ಕ್ಷೇತ್ರದಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ವತಿಯಿಂದ ಜರಗಿದ ತಾಳಮದ್ದಳೆ ಸಂದರ್ಭ ಯಕ್ಷಬಳಗದ ವತಿಯಿಂದ ಹಾಗೂ ಬಜೆ ಕ್ಷೇತ್ರದವತಿಯಿಂದ ಹಿರಿಯ ಪಾಕತಜ್ಞ, ಹವ್ಯಾಸಿ ಯಕ್ಷಗಾನ ಕಲಾವಿದ ತಾಡ ಗೋಪಾಲಕೃಷ್ಣ ಮಯ್ಯರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.