ಕಾಸರಗೋಡು: ಬೋವಿಕ್ಕಾನ ಸನಿಹದ ಮಲ್ಲ ನಿವಾಸಿ ವಿಕ್ಟರ್ ಡಿ.ಸೋಜ ಅವರ ಪುತ್ರ ಪ್ರವೀಣ್‍ಪ್ರಕಾಶ್ ಡಿ.ಸೋಜ(28)ಅವರ ನಿಗೂಢ ನಾಪತ್ತೆ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಟೈಲ್ಸ್ ಕಾರ್ಮಿಕನಾಗಿದ್ದ ಪ್ರವೀಣ್‍ಪ್ರಕಾಶ್ ಡಿ.ಸೋಜ ಅವರು ಏ. 18ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ವಾಪಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲಸಕ್ಕೆಂದು ದೂರದ ಊರಿಗೆ ತೆರಳಿದಲ್ಲಿ ಕೆಲವು ದಿವಸಗಳ ನಂತರ ಮನೆಗೆ ವಾಪಸಾಗುತ್ತಿದ್ದ ಇವರು ಈ ಬಾರಿ ಎರಡುವರೆ ತಿಂಗಳು ಕಳೆದರೂ ಮಾಹಿತಿಯಿಲ್ಲದಾಗಿದೆ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರವೀಣ್‍ಪ್ರಕಾಶ್ ಡಿ.ಸೋಜ ನಾಪತ್ತೆ ಪ್ರಕರಣ ನಿಗೂಢತೆಗೆ ಕಾರಣವಾಗಿದ್ದು, ತಕ್ಷಣ ಪತ್ತೆಹಚ್ಚುವಂತೆ ತಂದೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.