ಕಾಸರಗೋಡು: ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಕಾಸರಗೋಡು ಹೊಸ ಬಸ್‌ನಿಲ್ದಾಣ ವಠಾರದ ಬೃಹತ್ ಜಾಹೀರಾತು ಫಲಕವೊಂದು ಧರಾಶಾಯಿಯಗಿದೆ. ಈ ಕಾಲವಧಿಯಲ್ಲಿ ಜನರ ಓಡಾಟವಿಲ್ಲದ ಕಾರಣ ಜೀವಾಪಾಯ ತಪ್ಪಿದೆ. ಈ ಸಂದರ್ಭ ಯಾವುದೇ ವಾಹನಗಳೂ ಇರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ಇದೇ ಪ್ರದೇಶದಲ್ಲಿ ಬೃಹತ್ ಜಾಹೀರಾತು ಫಲಕವೊಂದು ಗಾಳಿಗೆ ಕುಸಿದು ಬಿದ್ದಿತ್ತು.
ಕುಂಬಳೆ ಸನಿಹದ ಬಂದ್ಯೋಡು ಇಚ್ಲಂಗೋಡಿನ ಬೆಜ್ಜಂಗಳ ಎಂಬಲ್ಲಿ ಬೃಹತ್ ಮರಬಿದ್ದು, ಎರಡು ಸ್ಕೂಟರ್‌ಗಳಿಗೆ ಹಾನಿ ಸಂಭವಿಸಿದೆ. ಮೌನೇಶ್ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಎಂಬವರ ಸ್ಕೂಟರ್‌ಗಳು ಹಾನಿಗೀಡಾಗಿದೆ. ಮನೆ ವರೆಗೆ ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ತಮ್ಮ ಸ್ಕೂಟರನ್ನು ರಸ್ತೆ ಅಂಚಿಗೆ ನಿಲ್ಲಿಸಿದ್ದು, ಮಂಗಳವಾರ ತಡರಾತ್ರಿ ಬಿರುಸಿನ ಗಾಳಿಗೆ ಮರವುರುಳಿ ಬಿದ್ದಿದೆ.
ಕಾಸರಗೋಡು ಹೊಸ ಬಸ್‌ನಿಲ್ದಾಣ ವಠಾರದ ಬೃಹತ್ ಜಾಹೀರತು ಫಲಕವೊಂದು ಬಿರುಸಿನ ಗಾಳಿಗೆ ಧರಾಶಾಯಿಯಾಗಿದೆ.