ಕುಂಬಳೆ: ಬಂದ್ಯೋಡು ಸನಿಹದ ಅಡ್ಕದಲ್ಲಿ ಆತ್ಮಹತ್ಯೆಗೆ ಯತ್ನಿಸುವ ಮಧ್ಯೆ ಹಗ್ಗ ತುಂಡಾಗಿ ಬಿದ್ದು, ಗಂಭೀರಾವಸ್ಥೆಯಲ್ಲಿದ್ದ ಗೃಹಿಣಿ ಕೊನೆಗೂ ಶಾವಿಗೆ ಶರಣಾಗಿದ್ದಾಳೆ. ಅಡ್ಕ ಒಳಯಂ ರಸ್ತೆ ನಿವಾಸಿ ದಿ. ಮೂಸಾ ಎಂಬವರ ಪುತ್ರಿ ಆಯಿಷತ್ ರಿಯಾನಾ(೨೪)ಮೃತಪಟ್ಟ ಮಹಿಳೆ.
ಮಂಜೇಶ್ವರ ಬಟ್ಟಯಪದವು ನಿವಾಸಿ ಬಶೀರ್ ಅವರ ಪತ್ನಿ ಆಯಿಷತ್ ರಿಯಾನಾ ಜುಲೈ ೨೩ರಂದು ತಾಯಿ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾಗುವ ಮಧ್ಯೆ ಹಗ್ಗ ತುಂಡಾಗಿ ಬಿದ್ದು, ತಲೆಗೆ ಗಂಭೀರ ಗಾಯವುಂಟಾಗಿತ್ತು. ತಕ್ಷಣ ಇವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಗುರುವಾರ ಮೃತಪಟ್ಟಿದ್ದಾರೆ.
ಆಯಿಷತ್ ರಿಯಾನಾ ಹಾಗೂ ಬಶೀರ್ ಅವರ ವಿವಾಹ ಮೂರುವರೆ ವರ್ಷದ ಹಿಂದೆ ನಡೆದಿದ್ದು, ಈ ಸಂದರ್ಭ ೧೫ಪವನು ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಈ ಸಂಬAಧದಲ್ಲಿ ಎರಡುವರೆ ವರ್ಷ ಪ್ರಾಯದ ಮಹಮ್ಮದ್‌ಬಿಲಾಲ್ ಎಂಬ ಪುತ್ರನಿದ್ದಾನೆ. ಬಿಲಾಲ್ ಜನಿಸಿದ ಆರು ತಿಂಗಳಲ್ಲಿ ರಿಯಾನಾಗೆ ಹಲ್ಲೆ ನಡೆಸಿ ತಾಯಿಮನೆಗೆ ಕರೆತಂದು ಬಿಡಲಾಗಿದೆ. ಪತಿಯ ಕಿರುಕುಳದಿಂದ ಆಕೆ ಆತ್ಮಹತ್ಯೆಗೈದಿರುವುದಾಗಿ ಆಯಿಷತ್ ರಿಯಾನಾ ಅವರ ಸಂಬAಧಿಕರು ಪೊಲೀಸರಲ್ಲಿ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.