HEALTH TIPS

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚು ಯಾವ ಜಿಲ್ಲೆಯಲ್ಲಿ?: ಮಹಿಳಾ ಆಯೋಗದ ಅಂಕಿ ಅಂಶಗಳು ಇಂತಿವೆ

                ಕೊಚ್ಚಿ: ಮಹಿಳಾ ಆಯೋಗದ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ  ಎರ್ನಾಕುಳಂ ಜಿಲ್ಲೆ ಮುಂದಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವ. ಪಿ. ಸತಿದೇವಿ ಈ ಬಗ್ಗೆ ಮಾಹಿತಿ ನೀಡಿರುವರು. ಎರ್ನಾಕುಳಂ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್‌ನ ಎರಡನೇ ದಿನದಂದು ಕುಂದುಕೊರತೆಗಳನ್ನು ಇತ್ಯರ್ಥಪಡಿಸಿದ ನಂತರ ಅಧ್ಯಕ್ಷರು ಮಾತನಾಡುತ್ತಿದ್ದರು.

                  ವಿವಾಹ  ಸಂದರ್ಭದಲ್ಲಿ ಯುವತಿಯರಿಗೆ ಕೊಡುವ ಚಿನ್ನಾಭರಣ ಹಾಗೂ ಹಣವನ್ನು ಪತಿ, ಬಂಧುಗಳು ವಶಕ್ಕೆ ಪಡೆಯುತ್ತಾರೆ.ಸಂಬAಧ ಮುರಿದು ಬಿದ್ದಾಗ ಬಹುತೇಕ ಯುವತಿಯರು ಈ ಹಣ, ಒಡವೆ ಹಿಂತಿರುಗಸುವAತೆ ದೂರು ನೀಡಿ ಆಯೋಗದ ಮುಂದೆ ಬರುತ್ತಾರೆ. ಆದಾಗ್ಯೂ, ಇವುಗಳಲ್ಲಿ ಯಾವುದಕ್ಕೂ ಅವರು ಯಾವುದೇ ಪುರಾವೆಗಳು ಅಥವಾ ದಾಖಲೆಗಳನ್ನು ಹೊಂದಿರುವುದಿಲ್ಲ. ಇದರಿಂದ ಚಿನ್ನಾಭರಣ, ಹಣ ವಾಪಸ್ ಲಭಿಸದು. 

             ಮದುವೆ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಚಿನ್ನಾಭರಣ, ಹಣ ನೀಡಿದರೆ ಅದನ್ನು ಕಾನೂನು ರೀತಿಯಲ್ಲಿ ಸರಿಯಾಗಿ ದಾಖಲಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಈ ನಿಟ್ಟಿನಲ್ಲಿ ವಾರ್ಡ್ ಮಟ್ಟದ ಜಾಗೃತ ಸಮಿತಿಗಳು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಬೇಕು ಎಂಬುದು ಮಹಿಳಾ ಆಯೋಗದ ನಿಲುವು. ಜಾಗೃತ ಸಮಿತಿಗಳಿಗೆ ಶಾಸನಬದ್ಧ ಸ್ಥಾನಮಾನ ನೀಡಲಾಗಿದೆ ಎಂದರು.

                ಸಾಮಾಜಿಕ ಜಾಲತಾಣಗಳ ಮೂಲಕವೂ ಮಹಿಳೆಯರ ಮೇಲಿನ ದೌರ್ಜನ್ಯದ ದೂರುಗಳಿವೆ. ಇಂತಹ ದೌರ್ಜನ್ಯಗಳ ವಿರುದ್ಧ ದೂರು ನೀಡಲು ಮಹಿಳೆಯರು ಸೈಬರ್ ಪೋಲೀಸ್ ವ್ಯವಸ್ಥೆಯನ್ನು ಅವಲಂಬಿಸುವುದು ಉತ್ತಮ ಪ್ರವೃತ್ತಿಯಾಗಿದೆ. ಕೆಲಸದ ಸ್ಥಳದಲ್ಲೂ ಮಹಿಳೆಯರು ವ್ಯಾಪಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಐಟಿ ವಲಯದಲ್ಲಿ ಇದು ಹೆಚ್ಚು. ವಿನಾಕಾರಣ ಹಲವರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಮಹಿಳಾ ಆಯೋಗದ ಮಧ್ಯಪ್ರವೇಶದಿಂದಾಗಿ ಇಂತಹ ದೂರಿನಲ್ಲಿ ತಮಗಿರುವ ಸವಲತ್ತು ಹಾಗೂ ಪರಿಹಾರ ಪಡೆಯಲು ಸಾಧ್ಯವಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries