ಪಂಡಿಕ್ಕಾಡ್ : ನಿಪಾ ಬಾಧಿಸಿ ಮೃತಪಟ್ಟ ಅಶ್ಮಿಲ್ ಪುಟ್‍ಬಾಲ್ ಆಡುವ ಮತ್ತು ಕೌಶಲ್ಯದಿಂದ ಅಭ್ಯಾಸ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ.
ಅಶ್ಮಿಲ್ ಡ್ಯಾನಿಶ್ ಉತ್ತಮ ಫುಟ್ಬಾಲ್ ಆಟಗಾರರಾಗಿದ್ದು, ದುರದೃಷ್ಟವಶಾತ್ ನಿಪಾ ಬಾಧಿಸಿ ಮೊನ್ನೆ ಮೃತಪಟ್ಟಿದ್ದಾನೆ.
ಚೆಂಬ್ರಾಸ್ಸೆರಿ ಎಯುಪಿ ಶಾಲೆಯ ವಿದ್ಯಾರ್ಥಿ ಅಶ್ಮಿಲ್ ಆರು ಮತ್ತು ಏಳನೇ ತರಗತಿಯಲ್ಲಿ ಶಾಲಾ ಪುಟ್‍ಬಾಲ್ ತಂಡದ ಸದಸ್ಯನಾದ. ಅಂದು ಮಂಚೇರಿ ಉಪಜಿಲ್ಲಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಾಲೆ ಜಯಭೇರಿ ಬಾರಿಸಲು ಅಶ್ಮಿಲ್ ನ ಅದ್ಭುತ ಪ್ರದರ್ಶನವೇ ಕಾರಣ.
ಆತ ಹೈಸ್ಕೂಲ್ ತಲುಪಿದಾಗ, ಫುಟ್ಬಾಲ್ ತರಬೇತಿ ಮತ್ತು ಸಾಧ್ಯತೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅಧ್ಯಯನಕ್ಕಾಗಿ ಅಶ್ಮಿಲ್ ಪಂತಲ್ಲೂರ್ ಹೈಯರ್ ಸೆಕೆಂಡರಿ ಶಾಲೆಯನ್ನು ಆಯ್ಕೆ ಮಾಡಿದ್ದ. ಮನೆಯ ಸಮೀಪವೇ ಪ್ರೌಢಶಾಲೆ ಇದ್ದರೂ ಪಂತಲ್ಲೂರು ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ನೀಡುವ ಪ್ರೋತ್ಸಾಹದಿಂದಾಗಿ ಅಶ್ಮಿಲ್ ಆ ಶಾಲೆಗೆ ಸೇರ್ಪಡೆಗೊಂಡಿದ್ದ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆಯ ಫುಟ್ಬಾಲ್ ಶಿಬಿರದಲ್ಲಿ ಭಾಗವಹಿಸಿ ತಂಡದ ಮೊದಲ 25 ಸದಸ್ಯರಲ್ಲಿ ಸ್ಥಾನ ಗಳಿಸಿದ್ದ.
ಈ ಬಾರಿಯ ಶಿಬಿರದಲ್ಲಿ ತಂಡದಲ್ಲಿ ಉತ್ತಮ ಸ್ಥಾನ ಪಡೆಯಲು ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಜುಲೈ 12 ರಂದು ಶಿಬಿರ ಪ್ರಾರಂಭವಾಗುವ ಮೊದಲು, ಅಶ್ಮಿಲ್ ಅನಾರೋಗ್ಯಕ್ಕೆ ಒಳಗಾದ. ಜುಲೈ 10 ರಂದು, ಶಾಲೆಯಿಂದ ಮನೆಗೆ ಬಂದಾಗ ಅಶ್ಮಿಲ್ ತೀವ್ರ ಸುಸ್ತಾಗಿ ಮತ್ತು ಜ್ವರದಿಂದ ಬಳಲುತ್ತಿದ್ದ. ಔಷಧ ಸೇವಿಸಿದರೂ ಕಡಿಮೆಯಾಗದ ಕಾರಣ ಆ.12ರಂದು ಪಂಡಿಕ್ಕಾಟ್‍ನಲ್ಲಿರುವ ಖಾಸಗಿ ಕ್ಲಿನಿಕ್‍ಗೆ ತೆರಳಿ ಚಿಕಿತ್ಸೆ ಪಡೆದ. 13ರಂದು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮತ್ತೂ ಜ್ವರ ಕಡಿಮೆಯಾಗಲಿಲ್ಲ. ಮೆದುಳು ಜ್ವರ ಕಾಣಿಸಿಕೊಂಡ ನಂತರ ಪೆರಿಂದಲ್ಮಣ್ಣದ ಖಾಸಗಿ ಆಸ್ಪತ್ರೆಗೆ ತಕ್ಷಣವೇ ಸ್ಥಳಾಂತರಿಸಲಾಯಿತು. ಅಪರೂಪದ ವೈರಸ್ ಸೋಂಕಿನ ಶಂಕೆ ಕಂಡುಬಂದ ಕಾರಣ ಚಿಕಿತ್ಸೆ ಕೋಝಿಕ್ಕೋಡ್‍ಗೆ ಬಳಿಕ ಕರೆದೊಯ್ಯಲಾಯಿತು. ಅಶ್ಮಿಲ್ ನ ಮರಣದಿಂದ ಭವಿಷ್ಯದ ಓರ್ವ ಶ್ರೇಷ್ಠ ಫುಟ್ಬಾಲ್ ಆಟಗಾರನನ್ನು ಕಳೆದುಕೊಂಡಂತಾಗಿದೆ ಎನ್ನುತ್ತಾರೆ ಈತನ ಶಾಲಾ ಮಟ್ಟದ ಪ್ರದರ್ಶನದ ವಿಡಿಯೋ ನೋಡಿದವರು.