ಕಾಸರಗೋಡು: ವಾಚನಾ ವಾರಾಚರಣೆ ಅಂಗವಾಗಿ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆ, ಜಿಲ್ಲಾ ಮಾಹಿತಿ ಕಛೇರಿ, ಕಾಸರಗೋಡು ಇವರ ಸಹಯೋಗದಲ್ಲಿ ವೈಕಂ ಮುಹಮ್ಮದ್ ಬಶೀರ್ ಸಂಸ್ಮರಣೆ ಹಾಗೂ ಪರಿಸರ ಲೇಖಕ ಅಂಬಿಕಾಸುತನ್ ಮಾಙËಡ್ ಅವರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ಜುಲೈ 4 ರಂದು ಮಧ್ಯಾಹ್ನ 2 ಗಂಟೆಗೆ ಶಾಲೆಯಲ್ಲಿ ಜರುಗಲಿರುವುದು. ಅಂಬಿಕಾಸುತನ ಮಾಙËಡ್ ಸಮಾರಂಭ ಉದ್ಘಾಟಿಸುವರು. ಪಿಟಿಎ ಅಧ್ಯಕ್ಷ ರಂಜಿರಾಜ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು
ಶಾಲಾ ವಿದ್ಯಾರ್ಥಿಗಳ ಓದುವ ಅನುಭವದ ಟಿಪ್ಪಣಿಗಳ ಪ್ರಸ್ತುತಿ, ವಿಜೇತರಿಗೆ ಬಹುಮಾನವನ್ನೂ ನೀಡಲಾಗುವುದು. ಓದಿನ ಅನುಭವದ ಪ್ರಸ್ತುತಿ, ಯುಪಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಪ್ರಸ್ತುತಿ, ಕಥೆಗಾರರೊಂದಿಗೆ ಸಂವಾದ ಏರ್ಪಡಿಸಲಾಗುವುದು.ಓದಿನ ಅನುಭವಗಳ ಬಗ್ಗೆ ಪತ್ರಕರ್ತ ರವೀಂದ್ರನ್ ರಾವಣೇಶ್ವರಂ ಅವಲೋಕನ ನಡೆಸುವರು.
ಶಾಲಾ ಮುಖ್ಯೋಪಾಧ್ಯಾಯರು ಡಾ.ಎ.ವಿ.ಸರೇಶ್ ಬಾಬು, ಮುಖ್ಯಶಿಕ್ಷಕ ಎಂ.ಪಿ ರಾಜೇಶ್ ಪಾಲ್ಗೊಳ್ಳುವರು.