ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಹೊಳೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ತಗ್ಗು ಪ್ರದೇಶ ಜಲಾವೃತವಾಗಿದ್ದು, ಜನರನ್ನು ಸುರಕ್ಷಿತ ಜಗಕ್ಕೆ ಸಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಬಂದ್ಯೋಡು ಕೊಕ್ಕೆಚ್ಚಾಲ್ ಸನಿಹ ರಸ್ತೆಗೆ ಮರ ಉರುಳಿಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ವಿದ್ಯುತ್ ಕಂಬ ಉರುಳಿಬಿದ್ದ ಪರಿಣಾಮ ವಿದ್ಯುತ್ ಸಂಪಕರ್ಜ ಅಸ್ತವ್ಯಸ್ತಗೊಂಡಿತ್ತು.
ಮಂಗಳವಾರ ಬೀಸಿದ ಬಿರುಸಿನ ಗಾಳಿಗೆ ಮನೆ ಮೇಲೆ ಮರ ಬಿದ್ದು ವ್ಯಪಕ ಹಾನಿಯುಂಟಾಗಿದೆ. ಇಲ್ಲಿನ 2 ಕುಟುಂಬಗಳು ಅಪಾಯದಿಂದ ಪಾರಾಗಿದ್ದಾರೆ. ರಾಜೀವನ್ ಹಾಗೂ ಲಕ್ಷ್ಮೀ ಎಂಬವರ ಮನೆಗೆ ಮರ ಉರುಳಿಬಿದ್ದು ಹಾನಿಯುಂಟಾಗಿದೆ. ಲಕ್ಷ್ಮಿ ಅವವರ ಮನೆ ಪಕ್ಕದ ಹೊಲದಲ್ಲಿರುವ ಮರದ ದೊಡ್ಡ ಕೊಂಬೆ ಅಡುಗೆ ಮನೆಯ ಮೇಲೆ ಬಿದ್ದು ಅಡುಗೆ ಮನೆಯ ಶೀಟ್ ಒಡೆದು ಹಾನಿ ಸಂಭವಿಸಿದೆ.