ಕಾಸರಗೋಡು: ವೆಳ್ಳರಿಕುಂಡು ತಾಲೂಕಿನ ಪಾಣತ್ತೂರು ವಲಯದ ಚಾಮುಂಡಿಕುನ್ನಿನ ಶಿವಪುರಂ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪರಿಸರ ಜಾಗೃತಿ, ಸಂರಕ್ಷಣೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರೂ, ನಿವೃತ್ತ ಅಧ್ಯಾಪಕರೂ ಆದ ಕಿಶೋರ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ವಾರ್ಡ್ ಸದಸ್ಯೆ ಪ್ರೀತಿ ಮನೋಜ್ ಉದ್ಘಾಟಿಸಿದರು. ಪರಿಸರ ಜಾಗೃತಿ, ಸಂರಕ್ಷಣೆಯ ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಜಯನ್ ಮಾಸ್ತರ್ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಬಿನೋಯ್, ದೇವರಾಜನ್, ಮೇಲ್ವಿಚಾರಕಿ ಮೀನಾಕ್ಷಿ, ಸೇವಾ ಪ್ರತಿನಿಧಿಗಳಾದ ಶ್ರೀಜ, ಸಂಧ್ಯಾ, ಶ್ರೀಜ ಮೊದಲಾದವರು ಮಾತನಾಡಿದರು.