ಕುಂಬಳೆ: ಭಾರತೀಯ ಕೆಥೋಲಿಕ ಯುವ ಸಂಚಲನ ಪೆರ್ಮುದೆ ಘಟಕದ ಆಶ್ರಯದಲ್ಲಿ ಪೆರ್ಮುದೆ ಲಾರೆನ್ಸ್ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವೃದ್ಧರ ದಿನವನ್ನು ಆಚರಿಸಲಾಯಿತು. ಬದುಕಿನ ದಾರಿತೋರಿಸಿದ ಹಿರಿಯರಿಗೆ ಪುಷ್ಪ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಧರ್ಮಗುರು ವಂದನೀಯ ಜೆರಾಲ್ಡ್ ಡಿ ಸೋಜ ಅವರು ಹಿರಿಯರನ್ನು ಉದ್ದೇಶಿಸಿ ಮಾತನಾಡಿದರು.
ಹಿರಿಯರಾದ, ಪೈವಳಿಕೆ ಪಂಚಾಯಿತಿ ಮಾಜಿ ಸದಸ್ಯೆ ತೆರೆಸಾ ಡಿ ಸೋಜ ತಮ್ಮ ಅನುಭವಗಳನ್ನು ಹಂಚಿಕೊAಡರು. ಹಿರಿಯ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿ ಹಾಡನ್ನು ಹಾಡಲಾಯಿತು. ಸಹಾಯಕ ಧರ್ಮಗುರು ವಂದನೀಯ ಫಾ.ಕ್ಲೋಡ್ ಕೋರ್ಡಾ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ, ಕಾರ್ಯದ೨ð ಲ್ಯಾನ್ಸಿ ಡಿ ಸೋಜ ಉಪಸ್ಥಿತರಿದ್ದರು. ಮೋನಿಕಾ ಡಿ ಅಲ್ಮೇಡಾ ಕಾರ್ಯಕ್ರಮ ನಿರೂಪಿ೧ದರು.