HEALTH TIPS

ಪ್ಲಸ್ ವನ್ ಸೀಟು ಬಿಕ್ಕಟ್ಟು; ಕಾಸರಗೋಡು, ಮಲಪ್ಪುರಂ ಜಿಲ್ಲೆಗಳಿಗೆ ತಾತ್ಕಾಲಿಕ ಬ್ಯಾಚ್‍ಗಳಿಗೆ ಸರ್ಕಾರದ ಅನುಮೋದನೆ

             ತಿರುವನಂತಪುರಂ: ಮಲಬಾರ್ ಪ್ರದೇಶದಲ್ಲಿ ಪ್ಲಸ್ ಒನ್ ಸೀಟ್ ಬಿಕ್ಕಟ್ಟಿಗೆ ಸರ್ಕಾರ ಕೊನೆಗೂ ಪರಿಹಾರ ಕಲ್ಪಿಸಿದೆ. ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಹೆಚ್ಚುವರಿ  ತಾತ್ಕಾಲಿಕ ಬ್ಯಾಚ್ ಅನುಮತಿಸಲಾಗಿದೆ.  

              ಮಲಪ್ಪುರಂಗೆ 120 ಬ್ಯಾಚ್ ಮತ್ತು ಕಾಸರಗೋಡಿಗೆ 18 ಹೊಸ ಬ್ಯಾಚ್ ಅನುಮತಿಸಲಾಗಿದೆ. ಮಲಬಾರ್ ಪ್ರದೇಶದ ಸರ್ಕಾರಿ ಶಾಲೆಗಲ್ಲಿ ಶೇ. 30 ಸೀಟು ಈ ಮೂಲಕ ಹೆಚ್ಚಳವಾಗಲಿದೆ. ಮತ್ತು ಅನುದಾನಿತ ಶಾಲೆಗಳಲ್ಲಿ ಶೇ.20 ಸೀಟು ಹೆಚ್ಚಳವಾಗಲಿದೆ. ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ ಅವರು ಶಾಸಕಾಂಗ ಸಭೆಯಲ್ಲಿ ನಿಯಮ 300 ಅಡಿಯಲ್ಲಿ ಈ ಅನುಮೋದನೆ ಪ್ರಕಟಿಸಿರುವರು.

             ಮಲಪ್ಪುರಂ ಜಿಲ್ಲೆಯಲ್ಲಿ, 74 ಸರ್ಕಾರಿ ಶಾಲೆಗಳಲ್ಲಿ 120 ತಾತ್ಕಾಲಿಕ ಬ್ಯಾಚ್‍ಗಳನ್ನು ಅನುಮತಿಸಲಾಗಿದೆ. ಮಲಪ್ಪುರಂನಲ್ಲಿ ಹ್ಯೂಮನಿಟೀಸ್ ವಿಭಾಗಕ್ಕೆ 59 ಯಾಚ್ ಗಳು,  ವಾಣಿಜ್ಯ ವಿಭಾಗಕ್ಕೆ 61 ಬ್ಯಾಚ್‍ಗಳನ್ನು ಹೊಸದಾಗಿ ಆರಂಭಿಸಲಾಗುವುದು. 

              ಕಾಸರಗೋಡು ಜಿಲ್ಲೆಗೆ  18 ಸರ್ಕಾರಿ ಕಾಲೇಜುಗಳಿಗೆ ಹೆಚ್ಚುವರಿ ಬ್ಯಾಚ್‍ಗಳನ್ನು ಅನುಮತಿಸಲಾಗಿದೆ. ಇದರಲ್ಲಿ ದು ಸೈನ್ಸ್ ಬ್ಯಾಚ್ ಮತ್ತು 4 ಹ್ಯುಮಾನಿಟೀಸ್ ಬ್ಯಾಚ್‍ಗಳು ಮತ್ತು 13 ವಾಣಿಜ್ಯ ಬ್ಯಾಚ್‍ಗಳಿರಲಿವೆ.

            ಮೊದಲ ಪೂರಕ ಹಂಚಿಕೆಗೆ ಆಧಾರದಂತೆ ಜುಲೈ 8 ಕ್ಕೆ ಮೊದಲ ಪ್ರವೇಶ ಪ್ರಾರಂಭವಾಯಿತು. ಮೊದಲ ಹಂಚಿಕೆಗೆ 30,245 ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಹೆಚ್ಚುವರಿ ಬ್ಯಾಚ್ ಅನುಮತಿಸದಿದ್ದರೆ ಕಾಸರಗೋಡು, ಮಲಪ್ಪುರಂ ಜಿಲ್ಲೆಗಳ ದ್ಯಾರ್ಥಿಗಳಿಗೆ ಅವರವರ ಜಿಲ್ಲೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂಬ ವರದಿಯ ಧಾರದಲ್ಲಿ ಹೆಚ್ಚುವರಿ ಸೀಟು ಅನುಮತಿಸಲಾಗಿದೆ.  ಪಾಲಕ್ಕಾಡ್ 4434, ಕೋಝಿಕ್ಕೋಡ್ 2307 ರಷ್ಟು ಸೀಟುಗಳು ಡಿಮೆಯಾಗಿದೆ. . ಕಣ್ಣೂರ್, 646 ಮತ್ತು ಕಾಸರಗೋಡು ಜಿಲ್ಲೆ 843 ಸೀಟುಗಳ ಕೊರತೆಯನ್ನು ಹೊಂದಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries