ಕಾಸರಗೋಡು: ಇಪ್ಪತ್ತು ಶೇಕಡಾ ಡಿ.ಎ. ಜಾರಿಗೊಳಿಸಬೇಕು, ವೇತನ ಪರಿಷ್ಕರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಬ್ಯಾಂಕ್ ಎಂಪ್ಲೋಯೀಸ್ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಿಬ್ಬಂದಿಗಳು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಝಲ್ ಉದ್ಘಾಟಿಸಿ ಮಾತನಾಡಿದರು.
ಕೇರಳ ಬ್ಯಾಂಕ್ ಎಂಪ್ಲಾಯಿಸ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪಿ.ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಚೂರಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್, ರಾಜ್ಯ ಸಮಿತಿ ಸದಸ್ಯ ಕೆ.ಎಂ.ಪ್ರಕಾಶನ್, ಎ.ಕೆ.ಬಿ.ಇ.ಎಫ್. ಜಿಲ್ಲಾ ಕಾರ್ಯದರ್ಶಿ ಇ.ವಿ.ಮೋಹನನ್, ಮಹಿಳಾ ಸಂಚಾಲಕಿ ಎ.ಶ್ರೀರೇಖಾ, ಜಿಲ್ಲಾ ಸಮಿತಿ ಸದಸ್ಯೆ ಪಿ.ಲತಾ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಬ್ರಹ್ಮಣ್ಯನ್, ರಿಟೈರ್ಡ್ ಕಾಂಗ್ರೆಸ್ ನೇತಾರರಾದ ಪಿ.ಎಸ್.ಗಿರೀಶ್ ಕುಮಾರ್, ಟಿ.ವಿ.ಮೋಹನನ್, ಸತೀಶ್ ಕರಿಂಗೋಡು ಮಾತನಾಡಿದರು. ಎಂಪ್ಲಾಯಿಸ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ್ ರಾವ್ ಸ್ವಾಗತಿಸಿದರು. ಕೆ.ಶಶಿಧರನ್ ವಂದಿಸಿದರು.